ಮಂಗಳವಾರ, ಮೇ 18, 2010

ಬಸವ ಮಾರ್ಗ

ನಿಜವಾದ ಬಸವ ಜಯಂತಿಯನ್ನು ಆಚರಣೆ ಮಾಡುವವರು ಒಂದು ಎಚ್ಚರವನ್ನು ಸದಾ ಇಟ್ಟುಕೊಳ್ಳಬೇಕು. ಬಸವಣ್ಣನವರ ಹುಟ್ಟಿದ ದಿನವನ್ನು ಕೇವಲ ಆತನ ಫೋಟೋ ಮೆರವಣಿಗೆ ಮೂಲಕ ಆಚರಿಸಿದರೆ ಸಾಲದು. ಕಾಯಕವೇ ಕೈಲಾಸವೆಂದು ಹೇಳಿದ ಬಸವಣ್ಣನವರ ಮಾತಿನಂತೆ ನಾವು ಸದಾ ಕೆಲಸದಲ್ಲಿ ನಿರತರಾಗಿರಬೇಕು. ಆ ಕಾಯಕ ಕೂಡ ಸತ್ಯ ಶುದ್ಧವಾದ ಕಾಯಕವಾಗಿರಬೇಕು. ಈ ಕಾಯಕದಿಂದ ಬಂದ ಹಣವನ್ನು ಸಂಸಾರಕ್ಕೆ ಬಳಸಿಕೊಳ್ಳುವುದರ ಜೊತೆಗೆ ಉಳಿದ ಹಣವನ್ನು ದಾಸೋಹಕ್ಕೂ ಬಳಸಬೇಕು. ಮತ್ತೊಂದು ಸಂಗತಿಯೆಂದರೆ ದಾಸೋಹ ಮಾಡುತ್ತಿದ್ದೇನೆ ಎಂಬ ಅಹಂ ಕೂಡ ನಮಗೆ ಬಂದಿರಬಾರದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ