ಲಿಂಗಾಯತ ತತ್ವಗಳಿಗೆ ಎಳ್ಳು ನೀರು ಬಿಟ್ಟಿರುವ ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಆದರೆ ಲಿಂಗಾಯತರ ಗುರುಗಳೆಂದೆ ಕರೆಸಿಕೊಳ್ಳುತ್ತಿರುವ ಮಠಾಧೀಶರು ಹಾಗೂ ಕೆಲವು ಲಿಂಗಾಯತ ಸಂಘಟನೆಗಳು ಯಡ್ಡಿಗೆ ಖುಚರ್ಿ ದೊರೆಯದೇ ಇರುವುದು ಲಿಂಗಾಯತ ಜನಾಂಗಕ್ಕಾದ ಅನ್ಯಾಯ ಎಂಬಂತೆ ಬಿಂಬಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಹಲವಾರು ಕಡೆ ಪ್ರತಿಭಟನೆ ನಡೆಸಿದ್ದಾರೆ. ದೇವೇಗೌಡ, ಕುಮಾರಸ್ವಾಮಿಯ ಪ್ರತಿಕೃತಿ ದಹಿಸುವ ಮಟ್ಟಕ್ಕೂ ಇವರ ಆಕ್ರೋಶ ಮುಂದುವರೆದಿದೆ. ಅಂದಂತೆ ಕನರ್ಾಟಕದ ಬಹುತೇಕ ಜನ ಲಿಂಗಾಯತರು ತಮ್ಮನ್ನು ಬಿ.ಜೆ.ಪಿ. ಪಕ್ಷದ ಜೊತೆ ಗುರುತಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.ಯಡ್ಡಿಗೆ ಮಾತುಕೊಟ್ಟು ಮುಖ್ಯಮಂತ್ರಿ ಖುಚರ್ಿಯನ್ನು ಬಿಟ್ಟುಕೊಡದೇ ಇರುವ ಗೌಡರ ಧೂರ್ತ ರಾಜಕೀಯ ಸರಿ - ತಪ್ಪೆಂದು ವಾದಿಸಲು ನಾನಿಲ್ಲಿ ಬಯಸಿಲ್ಲ. ಆದರೆ ಬಿ.ಜೆ.ಪಿಯೊಂದಿಗೆ ಗುರುತಿಸಿಕೊಂಡದ್ದೇ ಆದರೆ ಲಿಂಗಾಯತರು ಎಷ್ಟು ಮಟ್ಟಿಗೆ ಲಿಂಗಾಯತರಾಗಿ ಉಳಿಯಬಲ್ಲರು ? ಎಂಬ ಕಳಕಳಿಯಿಂದ ಮಾತ್ರ ಈ ಲೇಖನ ಬರೆಯುತ್ತಿದ್ದೇನೆ.
ಹಾಗೆ ನೋಡಿದರೆ ತಾತ್ವಿಕವಾಗಿ ಲಿಂಗಾಯತರಿಗೂ - ಬಿ.ಜೆ.ಪಿ, ವಿಶ್ವಹಿಂದೂ ಪರಿಷತ್,ಬಜರಂಗದಳ, ಕಿಸಾನಸಂಘ, ಆರ್.ಎಸ್.ಎಸ್, ಎ.ಬಿ.ವಿ.ಪಿ. ಮುಂತಾದ ಸಂಘಟನೆಗಳಿಗೆ ಒಂಚೂರು ಸಂಬಂಧವೇ ಇಲ್ಲ. ಒಂದು ಉತ್ತರದ ತುದಿಯಾದರೆ ಮತ್ತೊಂದು ದಕ್ಷಿಣದ ತುದಿ. ಒಂದು ಬೆಳ್ಳಂಬೆಳಕಾದರೆ.ಮತ್ತೊಂದು ಕಾರ್ಗತ್ತಲು. ಒಂದು ಬಟ್ಟಾಬಯಲಾದರೆ, ಮತ್ತೊಂದು ನಿಗೂಢವಾದ ದಟ್ಟ ಕಾಡು. ಒಂದು ವೈಜ್ಞಾನಿಕವಾದರೆ ಇನ್ನೊಂದು ತೀರಾ ಅವೈಜ್ಞಾನಿಕ. ಒಂದು ಸ್ಪಷ್ಟವಾದರೆ ಇನ್ನೊಂದು ಅಸ್ಪಷ್ಟ. ಸತ್ಯ ಹೀಗಿರುವಾಗ ಕೆಲವರು ಮಾತ್ರ ಎರಡೂ ಒಂದೇ ಎಂದು ನಂಬಿಸಲು ಹೊರಟಿದ್ದಾರೆ. ಇದಕ್ಕೆ ಬಹು ಮುಖ್ಯ ಕಾರಣರು ಲಿಂಗಾಯತರ ಗುರುಗಳೆಂದು ಕರೆಸಿಕೊಳ್ಳಲಾಗುತ್ತಿರುವ ಸ್ವಾಮಿಗಳು ಎಂದು ಇಲ್ಲಿ ನೇರವಾಗಿ ಹೇಳಲು ಇಚ್ಚಿಸುತ್ತೇನೆ.
ಕನರ್ಾಟಕದ ಕೆಲವು ಬೆರಳೆಣಿಕೆಯ ಸ್ವಾಮಿಗಳನ್ನು ಹೊರತು ಪಡಿಸಿದರೆ ಬಹುತೇಕರು ಈಗಾಗಲೇ ಚಡ್ಡಿ ತೊಟ್ಟಿದ್ದಾರೆ. ಕೆಲವರಂತೂ ತಮ್ಮ ಮಠದ ಅಂಗಳದಲ್ಲಿ ಆರ್.ಎಸ್.ಎಸ್. ಕುಣಿತಕ್ಕೆ ಅವಕಾಶ ನೀಡಿದ್ದಾರೆ. ರಾಮನ ಗುಡಿ ಕಟ್ಟಲು ಇಟ್ಟಂಗಿಗಳನ್ನು ಸಂಗ್ರಹಿಸಿ ತಾವು ಬಹುದೊಡ್ಡ ಘನಂದಾರಿ ಕೆಲಸ ಮಾಡಿದ್ದೇವೆ ಎಂಬ ಹಮ್ಮಿನಲ್ಲಿ ಬೀಗಿದ್ದಾರೆ. ನಾಲ್ಕೈದು ಜನ ಸ್ವಾಮಿಗಳಂತೂ ಚಡ್ಡಿಗಳ ಅಂಗಳದಲ್ಲಿ ಚೆಡ್ಡಿಯನ್ನೂ ಕಳಚಿಕೊಂಡು ಕವಾಯತ್ತು ಮಾಡಿದ್ದಾರೆ. ಇದು ಲಿಂಗಾಯತರ ಧಾಮರ್ಿಕ ಗುರುಗಳೆಂದು ಕರೆಸಿಕೊಳ್ಳುವ ಜಂಗಮರು ತಲುಪಿರುವ ಅಧಃಪತನದ ಸ್ಪಷ್ಟ ಸೂಚನೆ.
ಸರಿಯಾಗಿ ಗ್ರಹಿಸಿದರೆ : ಬ್ರಾಹ್ಮಣಿಕೆಯನ್ನು ಮೈಗೂಡಿಸಿಕೊಂಡಿರುವ ಬಿ.ಜೆ.ಪಿ. ಹಾಗೂ ಇತರ ಸಂಘಟನೆಗಳಿಗೂ ಲಿಂಗಾಯತರ ಮಠಾಧಿಪತಿಗಳಿಗೂ ಏನೇನು ಫರಕು ಇಲ್ಲ. ಯಾವುದನ್ನು ಬಸವಾದಿ ಪ್ರಮಥರು ಬೇರು ಸಹಿತ ಕಿತ್ತೆಸೆದು ಹೊಸ ಕನಸುಗಳನ್ನು ಈ ನೆಲದಲ್ಲಿ ಉತ್ತಿ-ಬಿತ್ತಿ ಬೆಳೆದಿದ್ದರೋ ಆ ಎಲ್ಲವನ್ನು ಸಾರಾಸಗಟಾಗಿ ಅರಗಿ ದಿಂಡು ಹೊಡೆದವರು ಈ ಗುರುಗಳು. `` ಅಡ್ಡ ದೊಡ್ಡ ನಾನಲ್ಲವಯ್ಯ ದೊಡ್ಡ ಬಸುರು ಎನಗಿಲ್ಲವಯ್ಯ ಎಂದ ಬಸವಣ್ಣನವರೆಲ್ಲಿ ಜಂಗಮ ಜಾತಿ ಲಿಂಗಾಯತರಲ್ಲೇ ಮೇಲ್ ಜಾತಿ ಎಂದು ತಿಳಿದುಕೊಂಡುವ ಈ ಜಂಗಮ ಗುರುಗಳೆಲ್ಲಿ ? ಜಂಗಮಜಾತಿಯಲ್ಲಿ ಹುಟ್ಟಿದ್ದೆ ತಮ್ಮ ಬಹುದೊಡ್ಡ ಸಾಧನೆ ಎಂದು ತಿಳಿದುಕೊಂಡಿರುವ ಕನರ್ಾಟಕದ ಮಠಾಧೀಶರು ತಮ್ಮಲ್ಲಿ ಯಾವುದೇ ಯೋಗ್ಯತೆ ಇಲ್ಲದೆಯೂ ಮಠಗಳಲ್ಲಿ ಅಮರಿಕೊಂಡಿದ್ದಾರೆ.ಅವರು ದಿನ ನಿತ್ಯ ತಾವು ಕುಳಿತ ಮಠಗಳ ಮೂಲಕ ಬಸವಾದಿ ಪ್ರಮಥರ ವಿಚಾರಗಳನ್ನು ತೊತ್ತಲ ತುಳಿಯುತ್ತ ಮುನ್ನಡೆದಿದ್ದಾರೆ.
ಗೋತ್ರನಾಮವ ಬೆಸಗೊಂಡರೆ ಮಾತನಾಡದೆ ಸುಮ್ಮನಿದ್ದಿರದೇಕೆ ? ಮಾದಾರ ಚೆನ್ನಯ್ಯನ ಗೋತ್ರವೆಂದು ಹೇಳಿ. ಕಕ್ಕಯ್ಯನ ಗೋತ್ರವೆಂದು ಹೇಳಿ ಎಂಬ ಮೂಲಕ ಅವರಲ್ಲಿ ಆತ್ಮಸ್ಠೈರ್ಯ ತುಂಬಿದ್ದ ಬಸವಣ್ಣನವರ ವಚನದ ಸಾಲುಗಳನ್ನು ಮರೆತು ಬಿಟ್ಟಿದ್ದಾರೆ.ತಮ್ಮ ಮಠದ ಅಂಗಳದಲ್ಲಿ ಇಂದಿಗೂ ಕೆಲವು ಜನಾಂಗದವರನ್ನು ಬಿಟ್ಟುಕೊಳ್ಳುವುದಕ್ಕೆ ರೆಡಿ ಇಲ್ಲ. ಅಪ್ಪಿಕೊಳ್ಳವುದಂತೂ ದೂರದಮಾತು. ಗುಡಿ ಗುಂಡಾರಗಳು ನಡೆಸುವ ಶೋಷಣೆಗಳನ್ನು ಗಮನಿಸಿದ , ಧಾಮರ್ಿಕ ಗುತ್ತೇದಾರಿಕೆಯನ್ನು ಖಂಡಿಸಿ ತನ್ನಾಶ್ರಯದ ರತಿಸುಖವನ್ನು ತಾನುಂಬ ಊಟವನು ತಾ ಮಾಡಬೇಕಲ್ಲದೆ ಅನ್ಯರ ಕೈಲಿ ಮಾಡಿಸಬಹುದೆ ? ಎಂದು ಮರ್ಮಘಾತಕವಾದ ನುಡಿಗಳಿಂದ ಪ್ರಜ್ಞೆಯುಂಟು ಮಾಡಿದ್ದ ಬಸವಾದಿ ಶರಣರ ಮಾತು ಇಂದು ಯಾವ ಮಠದ ಸ್ವಾಮಿ ಪಾಲಿಸುತ್ತಿದ್ದಾನೆ ? ಎಲ್ಲರೂ ತಮ್ಮ ಗಮನ ಭಕ್ತರಿಗೆ ಕೊಡುವುದಕ್ಕಿಂತ ತಾವಿರುವ ಮಠದ ಜಡ ಕಟ್ಟಡಕ್ಕೆ ( ಗುಡಿಗೆ )ಹೆಚ್ಚು ಪ್ರಾಧಾನ್ಯತೆ ಕೊಡುತ್ತಿದ್ದಾರೆ. ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕ ನರಕ ಎಂಬ ಮಾತನ್ನು ಮುದ್ದಾಂ ಮರೆತಿದ್ದಾರೆ. ಅತ್ಯಂತ ವೈಭವೋಪೇತವಾಗಿ ಗುಡಿಯಲ್ಲಿ ಕಲ್ಲಾಗಿರುವ ದೇವರಿಗೆ ಹಾಲು,ಮೊಸರು, ತುಪ್ಪ,ಜೇನು ತುಪ್ಪದ ಅಭಿಷೇಕ ಮಾಡುವುದೇ ಪೂಜೆ ಎಂಬಂತಾಗಿದೆ. ಉಳ್ಳವರು ಶಿವಾಲಯ ಮಾಡುವರು ನಾನೇನ ಮಾಡಲಿ ಬಡವನ್ಯ ? ಎಂಬ ವಚನದ ಸಾಲು ಇವರಿಗೆ ಮನಸ್ಸಿನಲ್ಲಾದರೂ ಕಾಡಲಾರದೆ ? ತಾಳ ಮಾನ ಸರಸವನರಿಯೆ.ಓಜೆ ಬಜಾವಣೆಯ ಲೆಕ್ಕವನರಿಯೆ.ಅಮೃತಗಣ ದೇವಗಣವನರಿಯೆ. ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ - ಎಂಬ ಮಾತುಗಳನ್ನು ಹೊಸಕಿ ಹಾಕಿ ತಮ್ಮ ಗುಡಿಯಲ್ಲಿ ಪ್ರತಿಷ್ಠಾಪಿಸಿದ ದೇವರಿಗೆ ಮತ್ತದೇ ಹಿಂದಿನ ಸಂಸ್ಕೃತ ಭಾಷೆಯ ಮಂತ್ರಗಳನ್ನ ಹೇಳುತ್ತ ಮುನ್ನಡೆದಿದ್ದಾರೆ.ಯಾವುದು ಜನಭಾಷೆಯಾಗಿಲ್ಲವೋ ಅದು ಮೋಸದ ಭಾಷೆಯೆಂದೇ ಅರ್ಥ. ಆದರೆ ಮಠಾಧೀಶರೆಂಬ ಜಂಗಮ ಪುಂಗವರು ಈ ಮಾತನ್ನು ಒಪ್ಪಿಕೊಳ್ಳುವುದೇ ಇಲ್ಲ. ಯಾಕೆಂದರೆ ಜನಭಾಷೆಯ ಕನ್ನಡದಲ್ಲಿ ಎಲ್ಲವನ್ನು ಹೇಳಿದರೆ ತಮ್ಮ ಆಷಾಢಭೂತಿತನ ಬಯಲಾಗುತ್ತದೆ ಎಂಬ ಭಯ.
ನಾಳೆ ಬರುವುದು ನಮಗಿಂದೇ ಬರಲಿ. ಇಂದು ಬರುವುದು ನಮಗೀಗಲೇ ಬರಲಿ - ಎಂಬ ವಿಚಾರವನ್ನು ಮರೆತು ತಮ್ಮ ಭಕ್ತರಲ್ಲಿ ಭುಗಿಲು ಹುಟ್ಟಿಸುತ್ತ, ಅ ಭಯವನ್ನು ತಮ್ಮ ಪಾದಕ್ಕೆ ಎರಗಿದರೆ , ದಕ್ಷಿಣ ಕೊಟ್ಟರೆ ಕಡಿಮೆ ಮಾಡುತ್ತೇವೆ ಎಂಬ ಭ್ರಮೆ ಹುಟ್ಟಿಸುತ್ತ ಸಾಗಿದ್ದಾರೆ. ಹೆಣ್ಣು ಮಾಯೆಯೆಂಬರು. ಹೆಣ್ಣು ಮಾಯೆಯಲ್ಲ. ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ. ಮನದ ಮುಂದಣ ಆಸೆಯೇ ಮಾಯೆ ! ಎಂಬುದು ಶರಣರ ನಿಲುವು. ಆದರೆ ಮಠಾಧೀಶರು ತಮ್ಮ ಮಠಗಳ ಗರ್ಭಗುಡಿಯೊಳಗೆ ಇನ್ನೂ ಮಹಿಳೆಯರನ್ನು ಬಿಟ್ಟುಕೊಳ್ಳವುದಿಲ್ಲ.ಅವಳು ಮುಟ್ಟಾಗುವಳು ಎಂಬ ಕಾರಣಕ್ಕೆ ಇನ್ನೂ ಮುಟ್ಟಬೇಡಿ, ಎಂಬ ಮಂತ್ರವನ್ನು ಚಾಲ್ತಿಯಲ್ಲಿ ಇಟ್ಟುಕೊಂಡಿದ್ದಾರೆ. ಆದರೆ ಮಹಿಳೆಯರನ್ನು ಗರ್ಭಗುಡಿಯಲ್ಲಿ ಬಿಟ್ಟುಕೊಳ್ಳದೆ ಇರುವವರಂತೆ ತೋರಿಸಿಕೊಳ್ಳವ ಇವರು ತಮ್ಮ ಖಾಸಗಿಕೋಣೆಯಲ್ಲಿ ಅವಳ ಕಳ್ಳಗರ್ಭಕ್ಕೆ ಕಾರಣೀಭೂತರಾಗುತ್ತಾರೆ.
ಹಾವಿನ ಹಲ್ಲಕಳೆದು ಹಾವ ನಾಡಿಸಬಲ್ಲಡೆ ಹಾವಿನ ಸಂಗವೇ ಲೇಸು ಕಂಡಯ್ಯ , ಹೆಣ್ಣಿನೊಳಗೆ ಮನವಾದರೆ ಲಗ್ನವಾಗಿಕೂಡುವುದು , ನಡುವೆ ಸುಳಿವಾತ್ಮ ಹೆಣ್ಣೂ ಅಲ್ಲ. ಗಂಡೂ ಅಲ್ಲ - ಎಂಬ ಮಾತುಗಳು ಇವರಿಗೆ ಅಂತರಂಗದಲ್ಲಿ ಇಷ್ಟವಾಗಿಯೇ ಕಾಣುತ್ತವೆ. ಆದರೆ ಬಹಿರಂಗದಲ್ಲಿ ಅವನ್ನು ಜಾರಿಗೆ ತರಲಾಗದ ನಡುಕ. ಅದನ್ನು ಜಾರಿಗೆ ತಂದುದೆ ಆದರೆ ಎಲ್ಲಿ ತಾವು ತೊಟ್ಟುಕೊಂಡ ಕಾವಿ ಕಳಚಿಬಿದ್ದು , ಜನ ಕಾಲಿಗೆರಗಿ ದಕ್ಷಿಣ ಕೊಡುವುದು ತಪ್ಪುತ್ತದೋ ಎಂಬ ಭಯ.
ಮೇಲಿನ ಈ ಎಲ್ಲಾ ಲಕ್ಷಣಗಳು ಬ್ರಾಹ್ಮಣೀಕೆಯ ಸಂಕೇತ. ಬ್ರಾಹ್ಮಣಿಕೆ ಆಂದರೆ ಬೇರೆ ಇನ್ನೇನು ಅಲ್ಲ. ಆಥವಾ ಬ್ರಾಹ್ಮಣ ಜಾತಿಯಲ್ಲ. ಮೋಸದ ನಡವಳಿಕೆಯಿಂದ ಜನಸಾಮಾನ್ಯರನ್ನು ದಿಕ್ಕು ತಪ್ಪಿಸಿ ಅದರ ಲಾಭ ಪಡೆಯುವುದೆಂದೇ ಅರ್ಥ. ಬಸವಾದಿ ಶರಣರ ನಿರ್ಗಮನವಾದ ನಂತರ ಅವರ ಅನುಯಾಯಿ ಮಠಗಳೆಂದು ಹೇಳಿಕೊಂಡ ಸ್ವಾಮಿಗಳು , ಮಠಗಳು ಇಂದು ಆ ತತ್ವಗಳಿಗೆ ಎಳ್ಳು ನೀರು ಬಿಟ್ಟು ಹಿಂದಿನ ಪರಂಪರಾಗತವೆಂಬ ಜೊಳ್ಳು ಆಚರಣೆಗಳಿಗೆ ತಗಲು ಬಿದ್ದಿದ್ದಾರೆ. ವೇದವೆಂಬುದು ಓದಿನ ಮಾತು .ಶಾಸ್ತ್ರವೆಂಬುದು ಸಂತೆಯ ಸುದ್ದಿ. ಪುರಾಣವೆಂಬುದು ಪುರಾಣವೆಂಬುದು ಪುಂಡರಗೋಷ್ಠಿ, ತರ್ಕವೆಂಬುದು ತಗರ ಹರಟೆ ಎಂದು ಸಷ್ಟ ಮಾತುಗಳನ್ನು ಇವನ್ನೆಲ್ಲ ಜರಿದಿದ್ದರೂ ಲಿಂಗಾಯತ ಮಠಗಳ ಮಠಾಧೀಶರು ಇವನ್ನೇ ತಮ್ಮ ಮೌಲ್ಯ ಎಂದು ಆರಾಧಿಸುತ್ತ ಸಾಗಿದ್ದಾರೆ. ಒಂದರ್ಥದಲ್ಲಿ ಲಿಂಗಾಯತ ಮಠಾಧೀಪತಿಗಳೂ ಬ್ರಾಹ್ಮಣ್ಯಕ್ಕೆ ಮತ್ತೆ ಜೋತು ಬಿದ್ದಿದ್ದಾರೆ.
ನಮ್ಮ ಸಮಾಜ ಹಿಂದೊಂದು ಸಂದರ್ಭದಲ್ಲಿ ಬ್ರಾಹ್ಮಣ್ಯಕ್ಕೆ ಜೋತುಬಿದ್ದುದರ ಪರಿಣಾಮ ಘಜನಿಮೊಹ್ಮದನಂತಹ ಸಾಮಾನ್ಯ ರಾಜನು ಸಹ ನಮ್ಮ ದೇಶದ ಮೇಲೆ ದಂಡೆತ್ತಿ ಬಂದು ಇಲ್ಲಿನ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆದ. ನಮ್ಮ ತಾತ ಮುತ್ತಾತರೆಲ್ಲ ಅಕ್ಷರದ ಸಮೀಪಕ್ಕೆ ಬಂದರೆ ಅಕ್ಷರಗಳೇ ನಾಶವಾಗುತ್ತವೆ ಎಂದು ಹೇಳಿ ಅವರನ್ನು ಅಕ್ಷರ ಕಲಿಕೆಯಿಂದ ದೂರವೇ ಇಡಲಾಗಿತ್ತು. ಗುಲಾಮಗಿರಿ ಮಾಡುವುದೇ ಅವರವರ ಕರ್ಮ ಎಂದು ಸಾರಿಕೊಂಡು ಬರಲಾಗಿತ್ತು. ಇದರಿಂದ ದೇಶದ ಅತ್ಯುನ್ನತ ಸ್ಥಾನಗಳೆಲ್ಲ ಒಂದೇ ವರ್ಗದ ಜನರ ಪಾಲಾಗಿ ಹೋಯ್ತು. ಈ ಮಾತನ್ನು ತಿಳಿಯಬೇಕಾದವರು ಇಂದಿಗೂ ದೊಡ್ಡ ಹುದ್ದೆಯಲ್ಲಿ ವಿರಾಜಮಾನರಾಗಿರುವವರನ್ನು ಗಮನಿಸಬೇಕು. ಇವರು ಮತ್ತದೇ ಹಿಂದೆ ಇದ್ದ ಮನುವಾದವನ್ನು ಜಾರಿಗೆ ತರಲು ಹಂಬಲಿಸುತ್ತಾರೆ. ಮೌಢ್ಯಗಳನ್ನು ಯಥೇಚ್ಚವಾಗಿ ಬಿತ್ತುತ್ತಾರೆ. ಪೊಳ್ಳು ಸಿದ್ಧಾಂತಗಳ ಮೂಲಕ ಅವನ್ನು ಸಮಥರ್ಿಸುವ ಎತ್ತುಗಡೆಯಲ್ಲಿ ತೊಡಗುತ್ತಾರೆ. ಖೊಟ್ಟಿ ಗ್ರಂಥಗಳನ್ನು ರಚಿಸಿ ಅವು ಇತಿಹಾಸ ಎಂಬಂತೆ ಬಿಂಬಿಸುತ್ತಾರೆ. ಮನುಷ್ಯನ ಸಾಮಥ್ರ್ಯಕ್ಕಿಂತ ಅವನ ಹಣೆಬರಹವೇ ದೊಡ್ಡದು ಎಂಬಂತೆ ಹೇಳುತ್ತಾರೆ. ಶಾಸ್ತ್ರ - ಪುರಾಣ ಆಗಮಗಳೆಲ್ಲ ಮತ್ತೆ ವಿಜೃಂಭಿಸುತ್ತವೆ. ಜೋತಿಷ್ಯಶಾಸ್ತ್ರವೂ ಒಂದು ವೈಜ್ಞಾನಿಕ ತಳಹದಿಯ ಮೇಲೆ ರೂಪಿತವಾದ ಶಾಸ್ತ್ರವೆಂದು ಸಾರಿಕೊಂಡು ಬರುತ್ತಾರೆ. ಒಟ್ಟಿನಲ್ಲಿ ಮನುಷ್ಯತ್ವಕ್ಕಿಂತ ದೇವರೇ ಶ್ರೇಷ್ಠವೆಂದು ವಾದಿಸುತ್ತಾರೆ. ಆ ದೇವರನ್ನು ಗುತ್ತಿಗೆ ಹಿಡಿದು ನಮ್ಮನ್ನು ಕುರಿಯ ತುಪ್ಪಳ ಸುಲಿದಂತೆ ಸುಲಿಯುತ್ತಾರೆ. ಜೊತೆಗೆ ನಮ್ಮನ್ನು ಇವರು ಮೋಸಗೊಳಿಸುತ್ತಿದ್ದಾರೆ ಎಂಬ ಭಾವನೆ ಬರದಂತೆ ಹುತಾತ್ಮ ಪಟ್ಟಕಟ್ಟಿ ನಮ್ಮನ್ನು ಚಟ್ಟಕ್ಕೆ ಏರಿಸುತ್ತಾರೆ.
ನೋಡಿ : ಈ ನೆಲದಲ್ಲಿ ನಮ್ಮ ನಿಮ್ಮಂತೆ ರಕ್ತ ಮೌಂಸ ತುಂಬಿಕೊಂಡು ಓಡಾಡಿದ ಎಂಬಂತೆ ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಾಗದ ವ್ಯಕ್ತಿ ಮಹಾತ್ಮಗಾಂಧೀಜಿಯವರು. ಇಂಥ ಮಹಾತ್ಮನನ್ನು ಗುಂಡಿಕ್ಕಿ ಕೊಂದವರು ಇದೇ ಸನಾತನಿಗಳು. ಆದರೆ ಇವತ್ತು ಮತ್ತದೇ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಾರೆ. ಆತನ ಹೆಸರನ್ನು ಕ್ಷಣ ಕ್ಷಣವೂ ಪಠಿಸುತ್ತಾರೆ. ನಾಗಾಜರ್ುನ ಕೊಂಡ ಎಂಬ ಪ್ರದೇಶದಲ್ಲಿ ಬೌದ್ಧರ ಮಾರಣಹೋಮಕ್ಕೆ ಕಾರಣಿಕರ್ತನಾದ ಶಂಕರಾಚಾರ್ಯರ ತತ್ವಗಳೇ ಇವರಿಗೆ ಆದರ್ಶ.ಗೋಡ್ಸೆ, ಗೋವಾಳ್ಕರ್ ಗಳೆಲ್ಲ ಇವರ ನೈತಿಕ ಸಂಕೇತಗಳು.ಮನುಸ್ಮೃತಿ ಎಂಬ ಪಾಖಂಡಿ ಗ್ರಂಥವೇ ಇವರ ಸಂವಿಧಾನ. ಅಸಮಾನತೆಯನ್ನು ಪೋಷಿಸಿ ಬೆಳೆಸುವುದೇ ಇವರ ಆದ್ಯಕರ್ತವ್ಯ ಎಂದು ತಿಳಿದಿರುವವರು.
ವ್ಯಾಸ ಬೋಯಿತಿಯ ಮಗ , ಮಾರ್ಕಂಡೆಯ ಮಾತಂಗಿಯ ಮಗ,ಅಗಸ್ಯ ಕಬ್ಬಿಲನಾಗಿದ್ದರೂ ಸೈಇವರು ನಮ್ಮದೇ ಜನಾಂಗದ ಮಾಡೆಲ್ ಗಳನ್ನು ಪಡೆದು ಅವಕ್ಕೆ ಮತ್ತದೇ ಬ್ರಾಹ್ಮಣ್ಯದಲ್ಲಿ ಅದ್ದಿ ನಮ್ಮ ಮುಂದೆ ಇಡುತ್ತಾರೆ. ರಾಮ ಕ್ಷತ್ರಿಯನಾಗಿದ್ದರೂ , ಕೃಷ್ಣ ಗೊಲ್ಲರವನಾಗಿದ್ದರೂ , ಬುದ್ಧ ಕ್ಷತ್ರಿಯನಾಗಿದ್ದರೂ ,ಅಂಬೇಡ್ಕರ್ ಕೆಳವರ್ಗಕ್ಕೆ ಸೇರಿದವನಾಗಿದ್ದರೂ ಅವರನ್ನು ಮತ್ತೆ ಮತ್ತೆ ವಿಷ್ಣುವಿನ ಅವತಾರಗಳೆಂದು ಪ್ರಚುರ ಪಡಿಸುತ್ತಾರೆ.ಬ್ರಾಹ್ಮಣ್ಯವನ್ನು ಸಂಪೂರ್ಣ ವಿರೋಧಿಸಿದ ಬುದ್ಧನಂತಹ ವ್ಯಕ್ತಿಯನ್ನೂ ಯಾವ ನಾಚಿಕೆಯೂ ಇಲ್ಲದೆ ವಿಷ್ಣುವಿನ ಹನ್ನೊಂದನೆಯ ಅವತಾರ ಎಂದು ಕರೆಯುತ್ತಾರೆ. ಯಾವುದನ್ನು ಅಂಬೇಡ್ಕರ ತನ್ನ ಜೀವತಾವಧಿಯವರೆಗೂ ವಿರೋಧಿಸುತ್ತ ಬಂದನೋ , ಆತನಿಗೆ ಆಧುನಿಕ ಮನು ಎಂಬ ಬಿರುದು ನೀಡಿ (ಗೌರವಿಸುವಂತೆ ಕಂಡರೂ) ಆತನನ್ನು ಸೂಕ್ಮವಾಗಿ ಕೊಲೆಮಾಡುತ್ತಾರೆ. ಹಿಂದೂ ಧರ್ಮದ ಟೊಳ್ಳುತನಗಳನ್ನು ನಖಶಿಖಾಂತವಾಗಿ ವಿರೋಧಿಸಿದ ಹಾಗೂ ಯಾವಾಗಲೂ ಪ್ರಗತಿಗೆ ವಿರೋಧಿಯಾಗಿರುವ ಪೂಜಾರಿ, ಪುರೋಹಿತ ಮುಲ್ಲಾ, ಪಾದ್ರಿಗಳನ್ನು ನಂಬಲು ಹೋಗಬೇಡಿ. ಅವರು ಪ್ರಗತಿಯ ವಿರೋಧಿಗಳು. ಅವರು ತಮ್ಮನ್ನು ಎಂದೂ ತಿದ್ದಿಕೊಳ್ಳುವುದಿಲ್ಲ. ಅವರನ್ನು ಈ ದೇಶದಿಂದಲೇ ಒದ್ದೋಡಿಸಿ ಎಂದು ಸ್ಪಷ್ಟವಾಗಿಯೆ ಹೇಳಿದರು. ಆದರೆ ಪರಿಸ್ಥಿತಿ ಏನಾಗಿದೆಯೆಂದರೆ ಇಂಥ ಕ್ರಾಂತಿಪುರುಷ ವಿವೇಕಾನಂದರಿಗೂ ಇಂದು ಮಕಮಲ್ಲಿನ ಟೋಪಿ ಹೊಲಿಸಿದ್ದಾರೆ ಈ ಹಿಂದೂ ಟೆರರಿಸ್ಟ ಗಳು. ಚಾಲ್ತಿಯಲ್ಲಿರುವ (ನಮ್ಮವರೇ ಆಗಿರುವ - ನಮ್ಮವೇ ಆಗಿರುವ ) ವ್ಯಕ್ತಿ - ಸಂಗತಿಗಳನ್ನು ತಮ್ಮ ಕಬ್ಜಾ ಮಾಡಿಕೊಂಡು ನಮ್ಮನ್ನು ಕುರಿಗಳನ್ನಾಗಿ ಮಾಡುತ್ತಾರೆ. ಹುಬ್ಬಳ್ಳಿಯ ಈದ್ಗಾ ಮೈದಾನ , ಅಯೋಧ್ಯೆಯ ರಾಮಮಂದಿರ , ಬಾಬಾ ಬುಡನಗಿರಿ ಬೆಟ್ಟ , ಇದೀಗ ಸೇತು ಸಮುದ್ರಂ ವಿವಾದಗಳನ್ನು ಯಾರಾದರೂ ಸೂಕ್ಷ್ಮವಾಗಿ ಪರಿಶೀಲಿಸಬಹುದು.
ಇವನ್ನೆಲ್ಲ ಗಮನಿಸಿದಾಗ ಬ್ರಾಹ್ಮಣರ ಪುರೋಹಿತರಿಗೂ , ಲಿಂಗಾಯತರ ಜಂಗಮ ಮಠಾಧೀಶರಿಗೂ ಯಾವುದೇ ರೀತಿಯ ವ್ಯತ್ಯಾಸ ಕಂಡುಬರುವುದಿಲ್ಲ. ಇವರಲ್ಲಿ ಯಾವುದೇ ತಾತ್ವಿಕ ಸಿದ್ಧಾಂತಗಳೂ ಇಲ್ಲ. ತಮ್ಮ ಸುತ್ತ ನೆರೆದ ಜನರನ್ನು ಧರ್ಮದ ಹೆಸರು ಹೇಳಿಕೊಂಡು ಸುಲಿಯುವುದೊಂದೇ ಇವರ ಧರ್ಮವಾಗಿದೆ. ಹಿಂದೊಂದು ಸಂದರ್ಭದಲ್ಲಿ ಮೈಸೂರು ರಾಜ್ಯದ ಹೈಕೋರ್ಟ ಮೆಟ್ಟಲನ್ನು ಏರಿ ಅಲ್ಲಿ ವಾದಿಸಿ ನ್ಯಾಯಿಕ ತೀಪರ್ು ಪಡೆದಂತೆ ಇವರೂ ಲಿಂಗಿ ಬ್ರಾಹ್ಮಣರು ! ರಂಭಾಪುರಿ ಪಂಚಪೀಠ(ಡ)ದ ಸ್ವಾಮಿಯಂತೂ ಇಂಥ ಲಿಂಗಿ ಬ್ರಾಹ್ಮಣರ ಹಿಂದೆ ಇಂದು ಲಿಂಗಾಯತರು ಹೊರಟಿರುವುದು ಎಷ್ಟು ಸರಿ ? ಮಠಾಧೀಶರೇ ನಮ್ಮ ಏನೆಲ್ಲ ಬೆಳವಣಿಗೆಗೆ ಕಾರಣ ಎಂದು ತಿಳಿದ ಲಿಂಗಾಯತರ ಅವಜ್ಞತೆಯೂ ಇದಕ್ಕೆ ಕಾರಣ ಎಂದು ಹೇಳದೆ ವಿಧಿಯಿಲ್ಲವಾಗಿದೆ.
ಇವನಾರವ ಇವನಾರವ ಎನ್ನದೆ ಇವ ನಮ್ಮವ , ಇವ ನಮ್ಮವ ಎಂದು ಎಲ್ಲರನ್ನು ಅಪ್ಪಿಕೊಂಡ ಧರ್ಮ ಮನುವಾದಿಗಳಾಗಿರುವ ಜಂಗಮರ ಮೂಲಕ , ಇವನಾರ - ಇವನಾರವ ಎಂದು ಕೇಳುವಂತಾಗುತ್ತೇವೆ. ಅದ್ದರಿಂದ ನಿಜವಾದ ಬಸವಾದಿ ಶರಣರ ಅನುಯಾಯಿಗಳೆಂದು ಹೇಳಿಕೊಳ್ಳುವ ಲಿಂಗಾಯತರು ತಮ್ಮ ತತ್ವಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ವಚನ ಸಾಹಿತ್ಯದ ತಾಯಿ ಹೇಳಿದಂತೆ ನಾವು ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆ ಹೊರತು , ಈ ಗುರುಗಳೆಂಬ ಭಾವುಗಗಳು ಹೇಳಿದಂತೆ ಅಲ್ಲ. ನಮಗೆ ನಮ್ಮ ಅರಿವು ಗುರುವಾಗಬೇಕೆ ಹೊರತು. ಯಾವೊಬ್ಬ ವ್ಯಕ್ತಿ ಗುರುವಾಗಬಾರದು.
ವೈದಿಕಶಾಹಿಯ ಗರ್ಭದಿಂದ ಉದಿಸಿದ ಬಿ.ಜೆ.ಪಿ ಎಂಬ ಸನಾತನಿಗಳ ಪಕ್ಷವನ್ನು ನಮ್ಮ ಗುರುಗಳು (?)( ಜಂಗಮರು) ನಂಬಿದ್ದಾರೆಂದೂ ಲಿಂಗಾಯತರು ನಂಬಿಕೊಂಡು ಹೊರಟೆವೆಂದರೆ ನಮ್ಮ ಹಳ್ಳವನ್ನು ನಾವೇ ತೋಡಿಕೊಳ್ಳುತ್ತೇವೆ. ಅಥವಾ ಹುಲಿಯ ಮೀಸೆಯ ಹಿಡಿದು ಉಯ್ಯಾಲೆ ಆಡಿದರು , ಮಡಿಲಲ್ಲಿ ಸುಣ್ಣವ ಕಟ್ಟಿಕೊಂಡು ಮಡುವ ಬಿದ್ದರು ಎಂಬಂಥ ಸ್ಥಿತಿಯಲ್ಲಿ ಲಿಂಗಾಯತರು ಸರ್ವನಾಶವಾಗುತ್ತಾರೆ. ಈ ಮೂಲಕ ಬಸವಾದಿ ಶರಣರನ್ನು ಕ್ಷಣ ಕ್ಷಣಕ್ಕೂ ಇರಿದು ಕೊಲ್ಲಿದ ಘಾತುಕತನಕ್ಕೆ ಪಕ್ಕಾಗುತ್ತಾರೆ. ಆದರೆ ಈ ಸತ್ಯವನ್ನು ಕನರ್ಾಟಕದ ಲಿಂಗಾಯತರು ತಿಳಿದುಕೊಳ್ಳುವರೆ ? 0 ವಿಶ್ವಾರಾಧ್ಯ ಸತ್ಯಂಪೇಟೆ
ಶನಿವಾರ, ಮೇ 22, 2010
ಕಾಂತಾ ಹೋರಾಟ ಕೋಮಾಸ್ಥಿತಿಯಲ್ಲಿರುವ ಸರಕಾರ !
ಗುಲಬಗರ್ಾ ಪೌರಕಾಮರ್ಿಕ ಸಂಬಳದ ಸಮಸ್ಯೆ ಯಡ್ಡಿ ಸರಕಾರದ ಜಿದ್ದಿನಿಂದ ಮತ್ತಷ್ಟು ಕಗ್ಗಂಟಾಗುತ್ತ ಸಾಗಿದೆ. ಚಳುವಳಿಗಾರರ ಮೇಲೆ ಇಲ್ಲ ಸಲ್ಲದ ಮೊಕದ್ದಮೆಗಳನ್ನು ಹೂಡಿ ಅವರಿಗೆ ಜೇಲಿಗೆ ಅಟ್ಟುವ ಜಿಲ್ಲಾಡಳಿತ ಕಾರ್ಯವೂ ಅಷ್ಟೆ ನಾಚಿಕೆಯಿಲ್ಲದೆ ನಡೆದುಹೋಗುತ್ತಿದೆ. 477 ಪೌರ ಕಾಮರ್ಿಕರಿಗೆ ಈ ಮೊದಲು ಗುಲಬಗರ್ಾ ಮಹಾನಗರ ಪಾಲಿಕೆ ತಾನೇ ಸಂಬಳ ವಿತರಿಸುತ್ತಿತ್ತು. ಆದರೆ ಅದೇನು ಕಾರಣವೋ ಒಮ್ಮಿದೊಮ್ಮೆ ಅಂದರೆ 35 ತಿಂಗಳ ಹಿಂದಿನಿಂದ ಸರಕಾರ ಅವರಿಗೆ ಸಂಬಳವೇ ನೀಡಲಿಲ್ಲ. ಎಸ್.ಕೆ.ಕಾಂತಾ ಅವರ ನೇತೃತ್ವದಲ್ಲಿ ಧರಣಿ, ರಸ್ತೆ ರೋಖೋ, ರೈಲ್ ರೋಖೋ ಹಾಗೂ ಸತ್ಯಾಗ್ರಹ ಕೊನೆಗೆ ಆಮರಣ ಉಪವಾಸ ಎಂದು ಕುಳಿತ ಮೇಲೆಯೆ ಸರಕಾರ ಅರೆಕಣ್ಣು ತೆರೆದಿದೆ. ಆದರೂ ಅದರೊಳಗೂ ತನ್ನ ಕಪಿಚೇಷ್ಟೆಯನ್ನು ಸರಕಾರ ಬಿಟ್ಟುಕೊಟ್ಟಿಲ್ಲ.
ಕಾಂತಾ ಅವರ ಆಮರಣ ಉಪವಾಸವನ್ನು ಅವರ ಆರೋಗ್ಯದ ನೆಪವೊಡ್ಡಿ (ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಡಾ.ಆರ್. ವಿಶಾಲ್ ಎಂಬ ಜಿಲ್ಲಾಧಿಕಾರಿ ಕೂಡಿಕೊಂಡು) ಒತ್ತಾಯ ಪೂರ್ವಕವಾಗಿ ಸತ್ಯಾಗ್ರಹದ ಸ್ಥಳದಿಂದ ಎತ್ತುಕೊಂಡು ಒಯ್ದರು. ಆದರೆ ಅವರನ್ನು ಗುಲಬಗರ್ಾಕ್ಕಿಂತಲೂ ಅತ್ಯುತ್ತಮವಲ್ಲದ ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ದಾಖಲು ಮಾಡುವ ಮೂಲಕ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟರು. ಕಾಂತಾ ಅವರ ದೇಹದಲ್ಲಿ ಗ್ಲುಕೋಸ್ ಪ್ರಮಾಣ 50 ರಷ್ಟು ಆಗಿತ್ತು. ಇದು ನಿಜಕ್ಕೂ ಕಳವಳದ ಸಂಗತಿ. ಆರೋಗ್ಯವಂತ ಮನುಷ್ಯನ ದೇಹದಲ್ಲಿ ಗ್ಲುಕೋಸ್ ಪ್ರಮಾಣ 100 ರಷ್ಟು ಇರಬೇಕು. ಇದು ಹೀಗೆ ಮುಂದುವರೆದುದೆ ಆದರೆ ಕಾಂತಾ ಕೋಮಾ ಸ್ಥಿತಿಗೆ ಹೋಗುವ ಸಾಧ್ಯತೆಗಳಿತ್ತು. ಇದನ್ನು ಜಿಲ್ಲಾ ವೈದ್ಯಾಧಿಕಾರಿಗಳು ದೃಢಪಡಿಸಿದ್ದರು. ಇಂಥ ಸಂದರ್ಭದಲ್ಲಿಯೂ ಜಿಲ್ಲಾಡಳಿತ ಕಾಂತಾ ಅವರ ಅನಾರೋಗ್ಯದ ಸ್ಥಿತಿಯಲ್ಲಿಯೂ ಅಲ್ಲಿ - ಇಲ್ಲಿ ಸುತ್ತಾಡಿಸಿ ರಾತ್ರಿ 12 ಗಂಟೆಗೆ ಆಸ್ಪತ್ರೆಯ ಮುಖ ತೋರಿಸಿದರೆಂದರೆ ಏನರ್ಥ ? ಒಂದು ಕಡೆ ಕಾಂತಾ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿತ್ತು, ಎಂದು ಹೇಳುವ ಜಿಲ್ಲಾಡಳಿತವೇ ಅವರನ್ನು ಬೇಕಂತಲೆ ಹಗಲೆಲ್ಲ ಅಲ್ಲಲ್ಲಿ ಸುತ್ತಾಡಿಸಿದ್ದು ಏತಕ್ಕೆ ? !
ಇದೆಲ್ಲಕ್ಕಿಂತ ಮುಖ್ಯವಾಗಿ ಗುಲಬಗರ್ಾ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಎಸ್.ಕೆ.ಕಾಂತಾ ಮಗ್ಗಲು ಮುಳ್ಳಾಗಿದ್ದಾರೆ. ಎಸ್.ಕೆ.ಕಾಂತಾ ಪ್ರತಿಯೊಂದನ್ನು ಸಂವಿಧಾನದ ಚೌಕಟ್ಟಿನಲ್ಲಿ ಮಾಡಬೇಕೆಂದು ಬಯಸುತ್ತಾರೆ. ಜನವಿರೋಧಿಯಾದ , ಸಂವಿಧಾನಿಕ ಶಕ್ತಿಯನ್ನು ಕಾಂತಾ ತಮ್ಮ ಎಂದಿನ ಹೋರಾಟದ ಮೂಲಕ ಬಗ್ಗು ಬಡಿಯುತ್ತಾರೆ. ಇದೆಲ್ಲ ಭ್ರಷ್ಟ ಅಧಿಕಾರಿಗಳಿಗೆ ನುಂಗಲಾಗದ ತುತ್ತಾಗಿದೆ. ಜೊತೆಗೆ ಯಡ್ಡಿಯ ಸರಕಾರಕ್ಕೂ ಕೂಡ ಕಾಂತಾ ನ್ಯಾಯಯುತವಾಗಿ, ಜನಪರ ಹೋರಾಟಗಳ ಮೂಲಕ ಬೆಳೆಯುವುದು ಹೊಟ್ಟೆ ಕಿಚ್ಚಿಗೆ ಕಾರಣವಾಗಿದೆ.
ಹಾಗಾಗಿ ಬೇಕಿಲ್ಲದ ಗಂಡ ಮೊಸರಿನಲ್ಲಿಯೂ ಕಲ್ಲು ಹುಡುಕಿದಂತೆ ನೆವ ಮಾಡಿಕೊಂಡು ಪೌರ ಕಾಮರ್ಿಕರ ಹೋರಾಟದ ನ್ಯಾಯಯುತ ಬೇಡಿಕೆಯನ್ನು ಹಿತ್ತಲಬಾಗಿಲ ಮೂಲಕ ಪರಿಹರಿಸಬೇಕೆಂದು ಸರಕಾರ ಹೊರಟಿದೆ. ಆದರೆ ಕಾಂತಾ ಮಾತ್ರ ಸರಕಾರ ನಿಲುವು ಏನೇ ಇದ್ದರೂ ಅದು ಪಾರದರ್ಶಕವಾಗಿ, ಸಂವಿಧಾನಿಕವಾಗಿ ಇರಲಿ. ಅಂದರೆ ಈ ಹಿಂದೆ ಪಾಲಿಕೆಯೇ ತನ್ನ ಕಾಮರ್ಿಕರಿಗೆ ನೇರ ಸಂಬಳ ನೀಡುತ್ತಿತ್ತು. ಈಗಲೂ ಅದು ನೀಡಲಿ. ಅಂದಿಲ್ಲದ ಸ್ವಸಹಾಯ ಸಂಘಗಳು ಈಗ ಏಕೆ ಬಂದವು. ಒಂದು ವೇಳೆ ಅಂದೆ ನೀವು ಯಾವುದೋ ಏಜೆನ್ಸಿ ಮೂಲಕ ನಮಗೆ ಸಂಬಳ ನೀಡುತ್ತಿದ್ದರೆ ಅವರ ಹೆಸರು ಲೈಸನ್ಸ್ , ಹೆಸರು ತಿಳಿಸಿ ಎಂದು ಹೇಳಿದ್ದೆ ಸರಕಾರಕ್ಕೆ ಅಂಡಿನಲ್ಲಿ ಮೆಣಸಿನಕಾಯಿ ಇಟ್ಟಂತಾಗಿದೆ. ಇಲ್ಲವೆ ನಮ್ಮನ್ನು ಕೆಲಸದಿಂದ ವಜಾಗೊಳಿಸಿದ್ದಾಗಿ ಬರಹದ ಮೂಲಕ ತಿಳಿಸಿ ಎಂದು ಹೇಳಿದ್ದು ಸರಕಾರಕ್ಕೆ ನುಂಗಲಾಗದ ತುತ್ತಾಗಿದೆ.
ಎಸ್.ಕೆ.ಕಾಂತಾ ಅವರನ್ನು ಓಪೆಕ್ ಆಸ್ಪತ್ರೆಯಿಂದ ಸಮಸ್ಯೆ ಬಗೆಹರಿಸುತ್ತೇನೆ ಎಂದೆಳಿ ಕರೆಯಿಸಿಕೊಂಡ ಮುಖ್ಯ ಮಂತ್ರಿ ಮತ್ತದೆ ರಾಗ ಹಾಡಿ ವಾಪಾಸು ಕಳಿಸಿದ್ದಾರೆ. ಇದರಿಂದ ವ್ಯಗ್ರರಾದ ಎಸ್.ಕೆ. ಕಾಂತಾ ಹಾಗೂ ಬೆಂಬಲಿಗರು ಸಂಬಳ ಕೊಡಿ ಇಲ್ಲವೆ ವಿಷ ನೀಡಿ ಎಂಬ ವಿನೂತನ ಪ್ರತಿಭಟನೆಯನ್ನು ಹಮ್ಮಿಕೊಂಡು ಪಾಲಿಕೆ ಅಧಿಕಾರಿಗಳಿಗೆ ದಿಗ್ಭಂದನೆ ಚಳುವಳಿ ಶುರುಮಾಡಿದ್ದಾರೆ. ಆದರೆ ಸರಕಾರ ಮಾತ್ರ ಮೊಂಡು ಹಟಕ್ಕೆ ಬಿದ್ದು ಕಾಂತಾ ಮತ್ತವರ ಬೆಂಬಲಿಗರನ್ನು ಜೈಲಿಗೆ ತಳ್ಳುವ ಮೂಲಕ ತನ್ನ ಹಠಮಾರಿತನವನ್ನು ಮುಂದುವರೆಸಿದೆ. ಇದು ಹೀಗೆ ಮುಂದುವರೆದುದೆ ಆದರೆ ಗುಲಬಗರ್ಾ ಹೊತ್ತಿ ಉರಿಯುವುದರಲ್ಲಿ ಯಾವುದೆ ಅನುಮಾನವಿಲ್ಲ. 0 ಶರಾವತಿ ಸತ್ಯಂಪೇಟೆ
ಗುರುವಾರ, ಮೇ 20, 2010
ಶಿವಮೊಗ್ಗ ವಿ.ವಿ.ಯಲ್ಲಿ ಪಂಚಪೀಠಿಗಳ ಹುನ್ನಾರ
ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೆ ಜಾಣ ಎಂಬಂತೆ ಯಡ್ಡಿಯ ಸರಕಾರದಲ್ಲಿ ಅಡ್ಡಾದಿಡ್ಡಿಯಾಗಿ ಆಲೋಚಿಸುವವನೆ ಪಂಡಿತ, ಬುದ್ದಿಜೀವಿ ಎಂದು ಕರೆಯಿಸಿಕೊಳ್ಳುವ ಕಾಲ ಬಂದಿದೆ. ಹೀಗಾಗಿ ಸರಕಾರದ ಸುತ್ತೋಲೆಗಳಲ್ಲಿ ದಿನ ನಿತ್ಯ ಅನೇಕ ಜನವಿರೋಧಿಯಾದ ಅಂಶಗಳೆ ಪ್ರಕಟವಾಗಿರುವ ಸಂಗತಿಗಳನ್ನು ನಾವೆಲ್ಲ ಪತ್ರಿಕೆಗಳಲ್ಲಿ ಓದುತ್ತೇವೆ. ಹಿಂದೊಮ್ಮೆ ಮುಜರಾಯಿ ಇಲಾಖೆಯ ಸಚಿವ ತನ್ನ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ದೇವಾಲಯಗಳಲ್ಲೂ ಯಡಿಯೂಪ್ಪನವರ ಹೆಸರಿನಲ್ಲಿ ಮಂಗಳಾರತಿ ಮಾಡಬೇಕು ಎಂದು ಹೊರಡಿಸಿದ್ದ ಆಜ್ಞೆ ಎಷ್ಟೊಂದು ಬಾಲಿಷವಾಗಿತ್ತು ಎಂಬುದು ಎಲ್ಲರೂ ಬಲ್ಲ ಸಂಗತಿಯಾಗಿತ್ತು. ಕಂಪ್ಯೂಟರಿನ ಇವತ್ತಿನ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಶಿವರಾತ್ರಿಯ ದಿನದಂದು ಸರಕಾರ ತನ್ನ ಖಚರ್ಿನಲ್ಲಿ ಗಂಗೋತ್ರಿ, ಯಮನೋತ್ರಿಯ ನದಿಯ ನೀರನ್ನು ತಂದು ಪವಿತ್ರ ಉದಕವೆಂದು ಹಂಚುವುದು ಎಷ್ಟೊಂದು ಅವೈಜ್ಞಾನಿಕ ಹಾಗೂ ಮೂರ್ಖತನದ ಪರಮಾವಧಿಯೆಂದು ಯಾರಿಗಾದರೂ ಅನ್ನಿಸದೆ ಇರದು.
ಆದರೆ ನಾಚಿಕೆ ಎಂಬುದೆ ಇಲ್ಲದ, ತಲೆಯಲ್ಲಿ ಕೊಂಚವೂ ಮಿದುಳು ಇಷ್ಟುಕೊಳ್ಳದ ,ಪುರೋಗಾಮಿ ಸರಕಾರದ ತಲೆಯಲ್ಲಿ ಇಂಥ ಅವೈಜ್ಞಾನಿಕ ಆಲೋಚನೆಗಳು ಹೊರಬರುವುದು ಸಹಜವೆ ಆಗಿದೆ. ಸರಕಾರದ ಇಂಥ ತಲೆಕೆಟ್ಟ ನೀತಿಯನ್ನು ಗಮನಿಸಿ , ಅಲ್ಲಲ್ಲಿ ಇರುವ ಸರಕಾರದ ಬೆಂಬಲಿಗರು ಅದರ ಲಾಭ ಪಡೆಯಬೇಕೆಂದು ಹೊಂಚುಹಾಕುತ್ತಿದ್ದಾರೆ. ತೀರಾ ಇತ್ತೀಚೆಗೆ ಶಿವಮೊಗ್ಗೆಯ ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಶ್ರೀಶ್ರೀ ಜಗದ್ಗುರು ಪಂಚಾಚಾರ್ಯ ಅಧ್ಯಯನ ಪೀಠವನ್ನು ಸ್ಥಾಪಿಸಲು ಕೋರಿ ಈಗಾಗಲೇ ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಿದ್ದಾರೆ.
ಜಗದ್ಗುರು ಎಂಬ ಪದವೆ ಮೊಟ್ಟ ಮೊದಲು ಪ್ರಜಾಪ್ರಭುತ್ವವನ್ನು ಅಣಕ ಮಾಡುವ ಪದ. ಇಲ್ಲಿ ಪರಸ್ಪರ ಸಮಾನತೆ ಎಂಬುದೆ ಇಲ್ಲ. ಇದು ಭೂರ್ಜತನದ ಪಳಿಯುಳಿಕೆ. ಅಸಮಾನತೆ- ಅವೈಜ್ಞಾನಿಕತೆ- ಅಸಂಗತ ಸಂಗತಿಗಳೆ ಇದರ ಮೂಲ ತತ್ವಗಳು. ಇನ್ನೂ ಪಂಚಾಚಾರ್ಯರ ಬಗೆಗೆ ಹೇಳುವುದಾದರೆ ಅವರ ಅಸ್ತಿತ್ವದ ಬಗೆಗೆ ಸ್ಪಷ್ಟ ಚಿತ್ರಗಳೆ ಇಲ್ಲ. ಜಗತ್ತು ಹುಟ್ಟುವುದಕ್ಕಿಂತ ಮೊದಲೆ ಅಂದರೆ ಕೈಲಾಸದಲ್ಲಿ ಪರಶಿವನಿಗೆ ಮತಬೋಧೆಯನ್ನು ಮಾಡಿದವರಂತೆ. ಆಮೇಲೆ ಮತ್ತೊಂದು ಕಡೆ ಹರಪ್ಪ ಮಹೆಂಜೋದಾರು ನಾಗರಿಕ ಸಂಸ್ಕೃತಿಯ ದಿನಮಾನಗಳಲ್ಲಿ ಪಂಚಾಚಾರ್ಯರು ಬದುಕಿದ್ದರಂತೆ. ಮಗದೊಂದು ಕಡೆ ವಿಭಿಷಣನಿಗೆ ಲಿಂಗಧಾರಣೆ ಮಾಡಿದರಂತೆ !! ಮತ್ತೊಂದು ಪರಮಾಶ್ಚರ್ಯದ ಸಂಗತಿಯೆಂದರೆ ಇವರಿಗೆ ತಂದೆ ತಾಯಿಗಳೆ ಇಲ್ಲವಂತೆ. ಯಾಕೆಂದರೆ ಇವರಿಗೆ ಹುಟ್ಟು ಸಾವುಗಳಿಂದ ಅತೀತರಾದ ಲಿಂಗೋದ್ಭವರಂತೆ ! ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ತಂದೆ - ತಾಯಿಗಳ ದೈಹಿಕ ಸಂಪರ್ಕ ಇಲ್ಲದೆ ಲಿಂಗದಲ್ಲಿ ಹುಟ್ಟಿದ ಲಿಂಗೋದ್ಭವರಂತೆ ! ಹಿಂಗೆ ಅಂತೆ ಕಂತೆಗಳ ಸಂತೆಯಲ್ಲಿ ಹುಟ್ಟಿದ ಜಗದ್ಗುರುಗಳ ಅಧ್ಯಯನದಲ್ಲಿ ಮಾಡುವುದಾದರೂ ಏನನ್ನೂ ?
ಪಂಚಾಚಾರ್ಯರ ಹುಟ್ಟೆ ಒಂದು ಪವಾಡ. ಅನಂತರ ಅವರ ಬದುಕಿದ, ಬರೆದರೆಂದು ಹೇಳಲಾಗುವ ಅಸಂಗತ ಸಂಗತಿಗಳು ಇಂದಿಗೂ ಮೂಟೆಗಟ್ಟಲೆ ಪೇರಿಸಿ ಇಟ್ಟು ಎಲ್ಲರನ್ನು ದಿಕ್ಕು ತಪ್ಪಿಸುತ್ತ ಹೊರಟಿದ್ದಾರೆ. ಹದಿನೈದು - ಹದಿನೇಳನೆ ಶತಮಾನದಲ್ಲಿ ರಚಿಸಿರಬಹುದಾದ ಖೊಟ್ಟಿ ಗ್ರಂಥ ಸಿದ್ಧಾಂತ ಶಿಖಾಮಣಿ ಎಂಬ ಪುಸ್ತಕವೆ ಇವರಿಗೆ ಆಧಾರ. ಈ ಕೃತಿಯ ಕುರಿತು ಸಂಪೂರ್ಣವಾಗಿ ಅಧ್ಯಯನ ನಡೆಸಿದ ಹಿರೇಮಲ್ಲೂರ ಈಶ್ವರನ್ ಎಂಬ ಭಾಷಾ ತಜ್ಞ , ಇದು ಕೇವಲ ಒಬ್ಬ ವ್ಯಕ್ತಿ ಬರೆದ ಕೃತಿ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮಗದೊಂದು ಚೋದ್ಯದ ಸಂಗತಿಯೆಂದರೆ ಈ ಪಂಚಪೀಠಗಳು ಮೂಲತಃ ಭಿನ್ನ ಭಿನ್ನ ಜನಾಂಗದವರು ಸಂಸ್ಥಾಪಿಸಿದ ಪೀಠಗಳು. ಕಾಲಾನಂತರವಷ್ಟೆ ಅವುಗಳನ್ನೆಲ್ಲ ತಮ್ಮ ಕಬ್ಜಾಕ್ಕೆ ತೆಗೆದುಕೊಂಡ ಜಾತಿ ಜಂಗಮರು ತಮ್ಮ ಹೆಸರಿನಿಂದ ಟೆನೆಂಟ್ ಮಾಡಿಸಿಕೊಂಡಿದ್ದಾರೆ ಅಷ್ಟೆ. ಮೊದ ಮೊದಲು ಚತುರಾಚಾರ್ಯರಾಗಿದ್ದ ಇವರು ಪಂಚಾಚಾರ್ಯರಾದದ್ದೂ ಕೂಡ ತೀರ ಇತ್ತೀಚಿನ ಶತಮಾನಗಳಲ್ಲಿ , ಇದು ಅಂಗೈನೆಲ್ಲಿಯಷ್ಟು ಸ್ಪಷ್ಟವಾಗಿದೆ.
ಜಟ್ಟಿ ಬಿದ್ದರೂ ಮೀಸೆಗೆ ಮಣ್ಣು ಹತ್ತಿಲ್ಲ ಎಂದು ಹೇಳುವ ಕಲೆಯನ್ನು ಕರಗತ ಮಾಡಿಕೊಂಡ ಪಂಚಾಚಾರ್ಯರ ಜಗದ್ಗುರು(ಜಾಗದ ಗುರುಗಳು ಅಥರ್ಾರ್ಥ ಗಜದ್ಗುರು)ಗಳು ಲಿಂಗಾಯತರಿಗೆ ನಾವು ಗುರುಗಳು ಎಂದು ಸಾಧಿಸುತ್ತಲೆ ಹೊರಟಿದ್ದಾರೆ. ಹೊಗಲಿ ಇವರು ಬಸವಣ್ಣನವರು ಬೆಳೆದು ಬಿತ್ತಿ ಹೋದ ಆ ಸಂಸ್ಕೃತಿಗೆ ತಕ್ಕುದಾದ ವಿಚಾರಗಳನ್ನು ಹೇಳುತ್ತಿದ್ದರೆ ಒಪ್ಪಿಕೊಳ್ಳಬಹುದಿತ್ತೇನೋ ? ಬಸವಣ್ಣನವರ ಹಾಗೂ ಅಂದಿನ ಶರಣರ ವಿಚಾರಗಳು ಉತ್ತರವಾದರೆ ಈ ಪಂಚಾಚಾರ್ಯ ಜಗದ್ಗುರುಗಳ ವಿಚಾರಗಳು ದಕ್ಷಿಣ ದಿಕ್ಕಿಗೆ ಕರೆದುಕೊಂಡು ಒಯ್ಯುತ್ತವೆ. ಬಸವಣ್ಣನವರ ವಿಚಾರಧಾರೆ ಇಂದಿನ ಪ್ರಜಾಪ್ರಭುತ್ವದ ಹಾಗೂ ವೈಜ್ಞಾನಿಕ ದಿನಮಾನಗಳಲ್ಲೂ ಪ್ರಸ್ತುತವೆನಿಸಿದರೆ ಈ ಜಗದ್ಗುರುಗಳ ವಿಚಾರಗಳೆಲ್ಲ ಅಸಂಗತ ಹಾಗೂ ಅವೈಜ್ಞಾನಿಕವೆಂದು ಮೇಲು ನೋಟಕ್ಕೆ ಗುರುತಿಸಬಹುದಾಗಿದೆ.
ಹೀಗೆ ತೀರಾ ಅವೈಜ್ಞಾನಿಕ ಹಾಗೂ ಅಸಂಗತ ಸಂಗತಿಗಳ ಮೇಲೆ ನಿಂತಿರುವ ಜಗದ್ಗುರುಗಳಿಗಾಗಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪೀಠವೊಂದನ್ನು ಸಂಸ್ಥಾಪಿಸುವುದು ನಿಜಕ್ಕೂ ಖಂಡನಾರ್ಹ ಸಂಗತಿಯಾಗಿದೆ. ಪ್ರಜಾಪ್ರಭುತ್ವದ ಇಂದಿನ ದಿನಮಾನಗಳಲ್ಲಿ ಅಸಮಾನತೆಯನ್ನು ಪೋಷಿಸಿ ಬೆಳೆಸಿಕೊಂಡು ಹೋಗುವ, ವ್ಯವಸ್ಥೆಯಲ್ಲಿನ ಮೇಲು ಕೀಳುಗಳಿಗೆಲ್ಲ ನಮ್ಮ ಕರ್ಮ- ಪ್ರಾರಬ್ಧವೆ ಕಾರಣ ಎಂದು ಸಾರಿಕೊಂಡು ಹೊರಟಿರುವ ಈ ಸನಾತನಿಗಳಿಗಾಗಿ ಪೀಠವನ್ನು ಸ್ಥಾಪಿಸುವುದೆಂದರೆ ನಾವು ತೋಡಿದ ಖೆಡ್ಡಾದಲ್ಲಿ ನಾವೆ ಬಿದ್ದು ಬಿಟ್ಟಂತೆ.
ನಾಚಿಕೆ ಎಂಬುದೆ ಇಲ್ಲದ, ಯಾರ್ಯಾರಿಗೋ ತಮ್ಮ ಬುದ್ದಿಯನ್ನು ಭೀಕರಿಗಾಗಿ ಇಟ್ಟಿರುವ ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಮಾತ್ರ ಒಮ್ಮತದಿಂದ ಸರಕಾರದ ಮೂಲಕ ರಾಜ್ಯಪಾಲರಿಗೆ ಪೀಠ ಸ್ಥಾಪನೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದಾರೆ ! ಸರಕಾರವೂ ಕೂಡ ಇವರ ವಾದಕ್ಕೆ ತಲೆದೂಗುತ್ತ ತನ್ನ ಖಜಾನೆಯಿಂದ ಐವತ್ತು ಲಕ್ಷ ರೂಪಾಯಿಗಳ ಮಂಜೂರಾತಿಯನ್ನೂ ಕೊಟ್ಟಿದೆ !!
ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಿನೆಟ್ ಹಾಗೂ ಸಿಂಡಿಕೇಟ್ ಸದಸ್ಯರು ಅಂದರೆ ಅವರೆಲ್ಲ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಿಕೊಂಡು ಹೋಗುವ ಸಮಾಜದ ಸ್ವಾಸ್ಥವನ್ನು ತಮ್ಮ ಬೌದ್ಧಿಕ ಪ್ರೌಢಿಮೆಯ ಮೂಲಕ ಬೆಳೆಸುತ್ತ ಹೊರಡುವವರು ಎಂದೆ ನಂಬಲಾಗಿತ್ತು. ಆದರೆ ಬಿಜೆಪಿಯ ಪುರೋಗಾಮಿ ಸರಕಾರ ಬಂದ ಮೇಲೆ ಯೋಗ್ಯತೆಯನ್ನು ಪಡೆದವರು ಸಿನೆಟ್- ಸಿಂಡಿಕೇಟ್ ಸದಸ್ಯರಾಗುವುದಕ್ಕಿಂತ ಬಿಜೆಪಿಯನ್ನು ಬೆಂಬಲಿಸುವವರು ವಿಶ್ವವಿದ್ಯಾಲಗಳಲ್ಲಿ ಬಂದು ಕುಂತಿದ್ದಾರೆ. ಇವರೆಲ್ಲರ ಒನ್ ಪಾಯಿಂಟ್ ಪ್ರೋಗ್ರಾಮ್ ಅಂದರೆ ಮತ್ತದೆ ಸನಾತನವಾಗಿರುವ , ಪುರಾತನವೆಂದು ಹೇಳಲಾಗುವ ಹಿಂದೂ ಸಂಸ್ಕೃತಿಯನ್ನು ಹೊಸ ಬಾಟಲಿಯಲ್ಲಿ ಕೊಡುವುದು. ಈ ಮೂಲಕ ಜನಸಾಮಾನ್ಯನ ಮುಗ್ಧ ಮನಸ್ಸುಗಳಲ್ಲಿ ಮತ್ತದೇ ಭೂಜ್ರ್ವತನದ ಬೀಜಗಳನ್ನು ಬಿತ್ತುವುದು. ಈ ಮೂಲಕ ಅವರೆಲ್ಲರನ್ನು ಕುರಿಗಳನ್ನಾಗಿ ಮಾಡುವುದು.
ನಾವೆಲ್ಲರೂ ಖಂಡಿಸಲೇ ಬೇಕಾದ ಮತ್ತೊಂದು ಸಂಗತಿಯಿದೆ.
ಶಿವಮೊಗ್ಗ ವಿಶ್ವವಿದ್ಯಾಲಯದ ಹೆಸರು ಕುವೆಂಪು ವಿಶ್ವವಿದ್ಯಾಲಯ. ಕುವೆಂಪು ಅವರಾದರೋ ತಾವು ಬದುಕಿರುವ ಜೀವಿತಾವಧಿಯವರೆಗೆ ವೈಚಾರಿಕರಾಗಿ ಬರೆದು ಬದುಕಿದವರು. ತಮ್ಮ ಸುತ್ತ ಮುತ್ತ ಇದ್ದ ಮೌಢ್ಯವನ್ನು, ಪುರೋಗಾಮಿ ಶಕ್ತಿಗಳು ಆಗಾಗ ಹೇಳುತ್ತ ಬಂದಿರುವ ಪಂಚಾಂಗಗಳನ್ನು, ಜೋತಿಷ್ಯರುಗಳನ್ನು ಅಮೂಲಾಗ್ರವಾಗಿ ತಿರಸ್ಕರಿಸಿದವರು. ರಾಹುಕಾಲ ಗುಳಿಕಾಲ ನೋಡುತ್ತ ಮನೆ ಬಿಟ್ಟು ಹೊರಗೆ ಬರುವ ಎಷ್ಟೋ ಜನ ವಿಶ್ವವಿದ್ಯಾಲಯಗಳ ಪ್ರೊಫೆಸರ್ಗಳನ್ನೆ ತರಾಟೆಗೆ ತೆಗೆದುಕೊಂಡವರು.ರಾಷ್ಟ್ರಕ್ಕೆ ಮಾರ್ಗದರ್ಶಕರಾಗಬೇಕಿರುವ, ಸಮಾಜದ ರೋಗ ರುಜಿನಿಗಳಿಗೆ ಮದ್ದೆರೆಯಬೇಕಾಗಿರುವ, ಸತ್ಯಾನ್ವೇಷಣೆಯೆ ಜೀವನಧ್ಯೇಹವಾಗಬೇಕಿರುವ ಸಾಹಿತಿಗಳು, ವಿಶ್ವವಿದ್ಯಾಲಯದ ಪ್ರೊಫೆಸರ್ಗಳು ಸರಕಾರದ ಸತ್ತೆಗೆ ಎಂದೂ ತಲೆಬಾಗಬೇಕಿಲ್ಲ ಎಂದು ತಿಳಿಸುತ್ತಾರೆ. ರಾಜ್ಯದಲ್ಲಿ ರಾಜಪ್ರಭುತ್ವ ಅಧಿಕಾರದಲ್ಲಿದ್ದ ದಿನಗಳಲ್ಲಿಯೆ ಅವರು ಕವಿಗರಸು ಗಿರಸುಗಳ ಋಣವಿಲ್ಲ ; ಅವನಗ್ನಿ ಮುಖಿ, ಪ್ರಲಯಶಿಖಿ ಎಂದವರು ಗುಡುಗುತ್ತಾರೆ.
ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ ಎಂಬ ತಮ್ಮ ಒಂದು ಉಪನ್ಯಾಸದಲ್ಲಿ ಯುವಕರು ನಿರಂಕುಶ ಮತಿಗಳಾಗಬೇಕು... ಮತಿ ಮಾನವನ ಸವರ್ೊತಕೃಷ್ಟ ಆಯುಧ... ಮಾಢ್ಯದಿಂದಲೂ ಮತಾಚಾರಗಳಿಂದಲೂ ಸಮಾಜ ಭೀತಿಯಿಂದಲೂ ರಾಜಭಯದಿಂದಲೂ ಸ್ವರ್ಗ ನರಕ ದೇವಾನುದೇವತೆಗಳ ಮೋಹಮಾಹೆಗಳಿಂದಲೂ ಅದು ಸತ್ವರಹಿತವಾಗಿದೆ ; ಕಾಂತಿ ಹೀನವಾಗಿದೆ. ಚಕ್ರವತರ್ಿಯಂತೆ ಸಿಂಹಾಸನದಲ್ಲಿ ಮಂಡಿಸಬೇಕಾದುದು ತೊತ್ತಾಗಿ ಕಾಲೊತ್ತಬೇಕಾಗಿದೆ. ಎಂದರೆ ಮತಿಗೆ ಅಂಕುಶಗಳು ಅತಿಯಾಗಿ ಹೋಗಿ ಜೀವವೆ ನಿಸ್ತೇಜವಾಗಿದೆ ಎಂದು ನುಡಿದು ಮತಿಯೊಂದೇ ಮಾನವನ ಬೆಳಕು ; ಅದಿಲ್ಲದವ ಮನುಷ್ಯನಾಗಲು ಸಾಧ್ಯವಿಲ್ಲ. ಅದು ವಿಚಾರಗಳೆ ಇಲ್ಲದೆ ಜಡವಸ್ತು ಮಾತ್ರ ಆಗಬಲ್ಲುದು ಎಂದು ಅವರು ಅಭಿಪ್ರಾಯ ಪಡುತ್ತಾರೆ.
ಮತ ನಮಗೊಂದು ದೊಡ್ಡ ಬಂಧನವಾಗಿದೆ ; ನಾಡಿನ ಏಳ್ಗೆಗೆ ಕುತ್ತಿಗೆ ಉರುಳಾಗಿದೆ. ಪರಮಶಾಂತಿಯೂ ಪರಮಾನಂದವೂ ಆಗಿರುವ ಪರಮೇಶ್ವರನನ್ನು ಪಡೆಯಲೆಂದು ಜೀವ ಮಾಡುವ ಪ್ರಯತ್ನವೇ ಮತದ ನಿಜಾವಸ್ಥೆ. ಆದರೆ ಈಗ ನಾವು ಮತ ಎಂದು ಕರೆದುಕೊಳ್ಳುವ ಆಚಾರ ಸಮೂಹ ಬರಿಯ ಸಾಮಾಜಿಕವಾದ ಕಟ್ಟುಕಟ್ಟಳೆಗಳ ಕಾಟವಾಗಿದೆ. ಒಬ್ಬರೊನೊಬ್ಬರು ಮುಟ್ಟದಿರುವುದು, ನೋಡದಿರುವುದು ; ಒಬ್ಬರೊಡನೊಬ್ಬರು ಕುಳಿತು ಭೋಜನ ಮಾಡದಿರುವುದು ; ನಾಮ ಹಾಕಿಕೊಳ್ಳುವುದು; ವಿಭೂತಿ ಹಚ್ಚಿಕೊಳ್ಳುವುದು, ಮುದ್ರೆ ಹೊಡೆದುಕೊಳ್ಳುವುದು, ಶಿಲುಬೆ ಧರಿಸಿಕೊಳ್ಳುವುದು , ಕೆಲವರನ್ನು ಸಾರ್ವಜನಿಕವಾದ ಬಾವಿ ಕರೆಗಳಲ್ಲಿ ನೀರು ತೆಗೆದುಕೊಳ್ಳುವಂತೆ ಮಾಡುವುದು ; ಕೆಲವರನ್ನು ದೇವಸ್ಥಾನಗಳಿಗೆ ಸೇರಿಸದಿರುವುದು... ಇತ್ಯಾದಿ ಮತಾಚರಣೆಗಳನ್ನವರು ಖಂಡಿಸುತ್ತಾರೆ.
ಈ ಪಂಚಾಚಾರ್ಯರ ಜಗದ್ಗುರುಗಳಾದರೋ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಎನ್ನುವಂತೆ ಇವತ್ತಿನ ದಿನಮಾನಗಳಲ್ಲೂ ಅಡ್ಡಪಲ್ಲಕ್ಕಿಯ ಜೀವವಿರೋಧಿ ಕೃತ್ಯಗಳಲ್ಲಿ ವಿರಾಜಮಾನರಾಗುತ್ತಾರೆ. ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಲೆ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಸಾರಿಕೊಂಡು ಬರುತ್ತಾರೆ. ತಾವು ಬಂಗಾರದ ಕಿರೀಟ ಧರಿಸಿ,ಭವ್ಯವಾದ ಮೆರವಣಿಗೆ ಹೊರಟರೆ ತಮ್ಮ ಅನುಯಾಯಿಗಳ ಬಾಳೂ ಬಂಗಾರವಾಗುತ್ತದೆ ಎಂದು ಭ್ರಮಿಸುತ್ತಾರೆ. ತಮ್ಮ ಬಲಗೈಯನ್ನು ಮೇಲೆತ್ತಿ ಆಶರ್ೀವಾದ ಮಾಡಿದರೆ ತಮ್ಮ ಶಿಷ್ಯನಿಗೆ ಒಳ್ಳೆಯದಾಗುತ್ತದೆ, ಬದಲಾಗಿ ಮನಸ್ಸಿನಲ್ಲಿಯೆ ಆ ಶಿಷ್ಯನನ್ನು ಹಳಿದರೆ ಕೆಟ್ಟದ್ದು ಘಟಿಸುತ್ತದೆ ಎಂದು ವಿವರಿಸುತ್ತಾರೆ. ತಾವು ಗುರುಗಳಾದ್ದರಿಂದ ಎಲ್ಲರಿಗಿಂತಲೂ ಒಂದು ಫೀಟೋ - ಎರಡು ಫೀಟೋ ಎತ್ತರದ ಸಿಂಹಾಸನವೇ ಬೇಕೆಂದು ಹಂಬಲಿಸುತ್ತಾರೆ. ಇಂದಿನ ಪ್ರಜಾಪ್ರಭುತ್ವದ ದಿನಗಳಲ್ಲಿಯೂ ರಾಜ್ಯಪಾಲರೆ ಇರಲಿ ರಾಷ್ಟ್ರಪತಿಗಳೆ ಇರಲಿ ಅವರೆಲ್ಲರಿಗಿಂತಲೂ ತಾವು ಹೆಚ್ಚು ಎಂದೆ ಭ್ರಮಿಸಿಕೊಂಡು ಭ್ರಮಾಲೋಕದಲ್ಲಿದ್ದಾರೆ.
ಹೀಗೆ ತೀರಾ ಅವೈಜ್ಞಾನಿಕ ಮನೋಭಾವದ, ಮಾನವ ಹಕ್ಕುಗಳ ಉಲ್ಲಂಘಿಸುತ್ತ ನಡೆದಿರುವ, ಪ್ರಜಾಪ್ರಭುತ್ವ ವಿರೋಧಿ ನಿಲುವುಗಳಿರುವ ದಲಿತರ- ದಮನಿತರ ಶೋಷಣೆಯೆ ತಮ್ಮ ಗುರಿಯೆಂದು ಸಾರಿಕೊಂಡು ಬಂದಿರುವ ಜಗದ್ಗುರುಗಳ ಪೀಠವನ್ನು ಅದೂ ಕುವೆಂಪು ವಿಶ್ವವಿದ್ಯಾಲಯದ ಮೂಲಕ ಸ್ಥಾಪಿಸುವುದೆಂದರೆ ಒಂದೆ ಏಟಿಗೆ ಕುವೆಂಪು ಹಾಗೂ ಪ್ರಜಾಪ್ರಭುತ್ವ ತತ್ವಗಳಿಗೆ ಎಳ್ಳು ನೀರು ಬಿಟ್ಟಂತೆ ಎಂದೆ ಅರ್ಥ.
ಯಾವ ಕಾಲದ ಶಾಶ್ತ್ರವೇನು ಹೇಳಿದರೇನು ?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ?
ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ?
ಎಂಬ ಕುವೆಂಪು ವಾಕ್ಯವನ್ನು ಮತ್ತೆ ಮತ್ತೆ ನೆನಪಿಸುತ್ತ, ಮನುವಿನ ಮೊಮ್ಮಕ್ಕಳಾದ ಜಗದ್ಗುರುಗಳ ಪೀಠ ಸ್ಥಾಪನೆಯನ್ನು ರಾಜ್ಯಪಾಲರು ತಿರಸ್ಕರಿಸುವ ಮೂಲಕ ಪ್ರಜಾಪ್ರಭುತ್ವದ ರಕ್ಷಣೆ ಮಾಡಲೇಬೇಕಾಗಿದೆ. ಮತಮೌಢ್ಯ, ಕುರುಡು ನಂಬಿಕೆಯನ್ನು ಇತ್ಯಾದಿಯನ್ನು ಪರಿಪೋಷಿಸುವುದು ಬೆಳೆಸುವುದು, ಘೋರ ಅಪರಾಧವೆಂದು ನಮ್ಮ ಸಂವಿಧಾನದ 51/1 ಎಂಬ ಪರಿಚ್ಚೇದ ಹೇಳುತ್ತದೆ. ಇದನ್ನಾದರೂ ನಮ್ಮ ರಾಜ್ಯಪಾಲರು ತಮ್ಮ ಗಮನಕ್ಕೆ ತಂದುಕೊಳ್ಳುವರೆ ಕಾದು ನೋಡಬೇಕು.
0 ವಿಶ್ವಾರಾಧ್ಯ ಸತ್ಯಂಪೇಟೆ
satyampet1969@gmail.com

ಬುಧವಾರ, ಮೇ 19, 2010
ಶಿವಮೊಗ್ಗದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಂಚಾಚಾರ್ಯರ ಅಧ್ಯಯನ ಪೀಠ
ಇದು ನಿಜಕ್ಕೂ ಕನ್ನಡಿಗರೆಲ್ಲರೂ ತಲೆ ತಗ್ಗಿಸಲೇಬೇಕಾದ ಸಂಗತಿ. ಕನಾೃಟಕದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಯಡಿಯೂರಪ್ಪನವರಿಗೆ ತಲೆ ಸರಿ ಇದ್ದಂತೆ ಕಾಣುತ್ತಿಲ್ಲ. ಆಥವಾ ಅವರ ತಲೆಯಲ್ಲಿ ತುಂಬಿರುವುದು ಬರೀ ಗೊಬ್ಬರ ಎಂದು ಹೇಳಬಹುದು.
ಮಂಗಳವಾರ, ಮೇ 18, 2010
ಬಸವ ಮಾರ್ಗ
ನಿಜವಾದ ಬಸವ ಜಯಂತಿಯನ್ನು ಆಚರಣೆ ಮಾಡುವವರು ಒಂದು ಎಚ್ಚರವನ್ನು ಸದಾ ಇಟ್ಟುಕೊಳ್ಳಬೇಕು. ಬಸವಣ್ಣನವರ ಹುಟ್ಟಿದ ದಿನವನ್ನು ಕೇವಲ ಆತನ ಫೋಟೋ ಮೆರವಣಿಗೆ ಮೂಲಕ ಆಚರಿಸಿದರೆ ಸಾಲದು. ಕಾಯಕವೇ ಕೈಲಾಸವೆಂದು ಹೇಳಿದ ಬಸವಣ್ಣನವರ ಮಾತಿನಂತೆ ನಾವು ಸದಾ ಕೆಲಸದಲ್ಲಿ ನಿರತರಾಗಿರಬೇಕು. ಆ ಕಾಯಕ ಕೂಡ ಸತ್ಯ ಶುದ್ಧವಾದ ಕಾಯಕವಾಗಿರಬೇಕು. ಈ ಕಾಯಕದಿಂದ ಬಂದ ಹಣವನ್ನು ಸಂಸಾರಕ್ಕೆ ಬಳಸಿಕೊಳ್ಳುವುದರ ಜೊತೆಗೆ ಉಳಿದ ಹಣವನ್ನು ದಾಸೋಹಕ್ಕೂ ಬಳಸಬೇಕು. ಮತ್ತೊಂದು ಸಂಗತಿಯೆಂದರೆ ದಾಸೋಹ ಮಾಡುತ್ತಿದ್ದೇನೆ ಎಂಬ ಅಹಂ ಕೂಡ ನಮಗೆ ಬಂದಿರಬಾರದು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)