ಶನಿವಾರ, ಮೇ 22, 2010
ಕಾಂತಾ ಹೋರಾಟ ಕೋಮಾಸ್ಥಿತಿಯಲ್ಲಿರುವ ಸರಕಾರ !
ಗುಲಬಗರ್ಾ ಪೌರಕಾಮರ್ಿಕ ಸಂಬಳದ ಸಮಸ್ಯೆ ಯಡ್ಡಿ ಸರಕಾರದ ಜಿದ್ದಿನಿಂದ ಮತ್ತಷ್ಟು ಕಗ್ಗಂಟಾಗುತ್ತ ಸಾಗಿದೆ. ಚಳುವಳಿಗಾರರ ಮೇಲೆ ಇಲ್ಲ ಸಲ್ಲದ ಮೊಕದ್ದಮೆಗಳನ್ನು ಹೂಡಿ ಅವರಿಗೆ ಜೇಲಿಗೆ ಅಟ್ಟುವ ಜಿಲ್ಲಾಡಳಿತ ಕಾರ್ಯವೂ ಅಷ್ಟೆ ನಾಚಿಕೆಯಿಲ್ಲದೆ ನಡೆದುಹೋಗುತ್ತಿದೆ. 477 ಪೌರ ಕಾಮರ್ಿಕರಿಗೆ ಈ ಮೊದಲು ಗುಲಬಗರ್ಾ ಮಹಾನಗರ ಪಾಲಿಕೆ ತಾನೇ ಸಂಬಳ ವಿತರಿಸುತ್ತಿತ್ತು. ಆದರೆ ಅದೇನು ಕಾರಣವೋ ಒಮ್ಮಿದೊಮ್ಮೆ ಅಂದರೆ 35 ತಿಂಗಳ ಹಿಂದಿನಿಂದ ಸರಕಾರ ಅವರಿಗೆ ಸಂಬಳವೇ ನೀಡಲಿಲ್ಲ. ಎಸ್.ಕೆ.ಕಾಂತಾ ಅವರ ನೇತೃತ್ವದಲ್ಲಿ ಧರಣಿ, ರಸ್ತೆ ರೋಖೋ, ರೈಲ್ ರೋಖೋ ಹಾಗೂ ಸತ್ಯಾಗ್ರಹ ಕೊನೆಗೆ ಆಮರಣ ಉಪವಾಸ ಎಂದು ಕುಳಿತ ಮೇಲೆಯೆ ಸರಕಾರ ಅರೆಕಣ್ಣು ತೆರೆದಿದೆ. ಆದರೂ ಅದರೊಳಗೂ ತನ್ನ ಕಪಿಚೇಷ್ಟೆಯನ್ನು ಸರಕಾರ ಬಿಟ್ಟುಕೊಟ್ಟಿಲ್ಲ.
ಕಾಂತಾ ಅವರ ಆಮರಣ ಉಪವಾಸವನ್ನು ಅವರ ಆರೋಗ್ಯದ ನೆಪವೊಡ್ಡಿ (ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಡಾ.ಆರ್. ವಿಶಾಲ್ ಎಂಬ ಜಿಲ್ಲಾಧಿಕಾರಿ ಕೂಡಿಕೊಂಡು) ಒತ್ತಾಯ ಪೂರ್ವಕವಾಗಿ ಸತ್ಯಾಗ್ರಹದ ಸ್ಥಳದಿಂದ ಎತ್ತುಕೊಂಡು ಒಯ್ದರು. ಆದರೆ ಅವರನ್ನು ಗುಲಬಗರ್ಾಕ್ಕಿಂತಲೂ ಅತ್ಯುತ್ತಮವಲ್ಲದ ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ದಾಖಲು ಮಾಡುವ ಮೂಲಕ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟರು. ಕಾಂತಾ ಅವರ ದೇಹದಲ್ಲಿ ಗ್ಲುಕೋಸ್ ಪ್ರಮಾಣ 50 ರಷ್ಟು ಆಗಿತ್ತು. ಇದು ನಿಜಕ್ಕೂ ಕಳವಳದ ಸಂಗತಿ. ಆರೋಗ್ಯವಂತ ಮನುಷ್ಯನ ದೇಹದಲ್ಲಿ ಗ್ಲುಕೋಸ್ ಪ್ರಮಾಣ 100 ರಷ್ಟು ಇರಬೇಕು. ಇದು ಹೀಗೆ ಮುಂದುವರೆದುದೆ ಆದರೆ ಕಾಂತಾ ಕೋಮಾ ಸ್ಥಿತಿಗೆ ಹೋಗುವ ಸಾಧ್ಯತೆಗಳಿತ್ತು. ಇದನ್ನು ಜಿಲ್ಲಾ ವೈದ್ಯಾಧಿಕಾರಿಗಳು ದೃಢಪಡಿಸಿದ್ದರು. ಇಂಥ ಸಂದರ್ಭದಲ್ಲಿಯೂ ಜಿಲ್ಲಾಡಳಿತ ಕಾಂತಾ ಅವರ ಅನಾರೋಗ್ಯದ ಸ್ಥಿತಿಯಲ್ಲಿಯೂ ಅಲ್ಲಿ - ಇಲ್ಲಿ ಸುತ್ತಾಡಿಸಿ ರಾತ್ರಿ 12 ಗಂಟೆಗೆ ಆಸ್ಪತ್ರೆಯ ಮುಖ ತೋರಿಸಿದರೆಂದರೆ ಏನರ್ಥ ? ಒಂದು ಕಡೆ ಕಾಂತಾ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿತ್ತು, ಎಂದು ಹೇಳುವ ಜಿಲ್ಲಾಡಳಿತವೇ ಅವರನ್ನು ಬೇಕಂತಲೆ ಹಗಲೆಲ್ಲ ಅಲ್ಲಲ್ಲಿ ಸುತ್ತಾಡಿಸಿದ್ದು ಏತಕ್ಕೆ ? !
ಇದೆಲ್ಲಕ್ಕಿಂತ ಮುಖ್ಯವಾಗಿ ಗುಲಬಗರ್ಾ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಎಸ್.ಕೆ.ಕಾಂತಾ ಮಗ್ಗಲು ಮುಳ್ಳಾಗಿದ್ದಾರೆ. ಎಸ್.ಕೆ.ಕಾಂತಾ ಪ್ರತಿಯೊಂದನ್ನು ಸಂವಿಧಾನದ ಚೌಕಟ್ಟಿನಲ್ಲಿ ಮಾಡಬೇಕೆಂದು ಬಯಸುತ್ತಾರೆ. ಜನವಿರೋಧಿಯಾದ , ಸಂವಿಧಾನಿಕ ಶಕ್ತಿಯನ್ನು ಕಾಂತಾ ತಮ್ಮ ಎಂದಿನ ಹೋರಾಟದ ಮೂಲಕ ಬಗ್ಗು ಬಡಿಯುತ್ತಾರೆ. ಇದೆಲ್ಲ ಭ್ರಷ್ಟ ಅಧಿಕಾರಿಗಳಿಗೆ ನುಂಗಲಾಗದ ತುತ್ತಾಗಿದೆ. ಜೊತೆಗೆ ಯಡ್ಡಿಯ ಸರಕಾರಕ್ಕೂ ಕೂಡ ಕಾಂತಾ ನ್ಯಾಯಯುತವಾಗಿ, ಜನಪರ ಹೋರಾಟಗಳ ಮೂಲಕ ಬೆಳೆಯುವುದು ಹೊಟ್ಟೆ ಕಿಚ್ಚಿಗೆ ಕಾರಣವಾಗಿದೆ.
ಹಾಗಾಗಿ ಬೇಕಿಲ್ಲದ ಗಂಡ ಮೊಸರಿನಲ್ಲಿಯೂ ಕಲ್ಲು ಹುಡುಕಿದಂತೆ ನೆವ ಮಾಡಿಕೊಂಡು ಪೌರ ಕಾಮರ್ಿಕರ ಹೋರಾಟದ ನ್ಯಾಯಯುತ ಬೇಡಿಕೆಯನ್ನು ಹಿತ್ತಲಬಾಗಿಲ ಮೂಲಕ ಪರಿಹರಿಸಬೇಕೆಂದು ಸರಕಾರ ಹೊರಟಿದೆ. ಆದರೆ ಕಾಂತಾ ಮಾತ್ರ ಸರಕಾರ ನಿಲುವು ಏನೇ ಇದ್ದರೂ ಅದು ಪಾರದರ್ಶಕವಾಗಿ, ಸಂವಿಧಾನಿಕವಾಗಿ ಇರಲಿ. ಅಂದರೆ ಈ ಹಿಂದೆ ಪಾಲಿಕೆಯೇ ತನ್ನ ಕಾಮರ್ಿಕರಿಗೆ ನೇರ ಸಂಬಳ ನೀಡುತ್ತಿತ್ತು. ಈಗಲೂ ಅದು ನೀಡಲಿ. ಅಂದಿಲ್ಲದ ಸ್ವಸಹಾಯ ಸಂಘಗಳು ಈಗ ಏಕೆ ಬಂದವು. ಒಂದು ವೇಳೆ ಅಂದೆ ನೀವು ಯಾವುದೋ ಏಜೆನ್ಸಿ ಮೂಲಕ ನಮಗೆ ಸಂಬಳ ನೀಡುತ್ತಿದ್ದರೆ ಅವರ ಹೆಸರು ಲೈಸನ್ಸ್ , ಹೆಸರು ತಿಳಿಸಿ ಎಂದು ಹೇಳಿದ್ದೆ ಸರಕಾರಕ್ಕೆ ಅಂಡಿನಲ್ಲಿ ಮೆಣಸಿನಕಾಯಿ ಇಟ್ಟಂತಾಗಿದೆ. ಇಲ್ಲವೆ ನಮ್ಮನ್ನು ಕೆಲಸದಿಂದ ವಜಾಗೊಳಿಸಿದ್ದಾಗಿ ಬರಹದ ಮೂಲಕ ತಿಳಿಸಿ ಎಂದು ಹೇಳಿದ್ದು ಸರಕಾರಕ್ಕೆ ನುಂಗಲಾಗದ ತುತ್ತಾಗಿದೆ.
ಎಸ್.ಕೆ.ಕಾಂತಾ ಅವರನ್ನು ಓಪೆಕ್ ಆಸ್ಪತ್ರೆಯಿಂದ ಸಮಸ್ಯೆ ಬಗೆಹರಿಸುತ್ತೇನೆ ಎಂದೆಳಿ ಕರೆಯಿಸಿಕೊಂಡ ಮುಖ್ಯ ಮಂತ್ರಿ ಮತ್ತದೆ ರಾಗ ಹಾಡಿ ವಾಪಾಸು ಕಳಿಸಿದ್ದಾರೆ. ಇದರಿಂದ ವ್ಯಗ್ರರಾದ ಎಸ್.ಕೆ. ಕಾಂತಾ ಹಾಗೂ ಬೆಂಬಲಿಗರು ಸಂಬಳ ಕೊಡಿ ಇಲ್ಲವೆ ವಿಷ ನೀಡಿ ಎಂಬ ವಿನೂತನ ಪ್ರತಿಭಟನೆಯನ್ನು ಹಮ್ಮಿಕೊಂಡು ಪಾಲಿಕೆ ಅಧಿಕಾರಿಗಳಿಗೆ ದಿಗ್ಭಂದನೆ ಚಳುವಳಿ ಶುರುಮಾಡಿದ್ದಾರೆ. ಆದರೆ ಸರಕಾರ ಮಾತ್ರ ಮೊಂಡು ಹಟಕ್ಕೆ ಬಿದ್ದು ಕಾಂತಾ ಮತ್ತವರ ಬೆಂಬಲಿಗರನ್ನು ಜೈಲಿಗೆ ತಳ್ಳುವ ಮೂಲಕ ತನ್ನ ಹಠಮಾರಿತನವನ್ನು ಮುಂದುವರೆಸಿದೆ. ಇದು ಹೀಗೆ ಮುಂದುವರೆದುದೆ ಆದರೆ ಗುಲಬಗರ್ಾ ಹೊತ್ತಿ ಉರಿಯುವುದರಲ್ಲಿ ಯಾವುದೆ ಅನುಮಾನವಿಲ್ಲ. 0 ಶರಾವತಿ ಸತ್ಯಂಪೇಟೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ