ಶನಿವಾರ, ಮೇ 22, 2010

ಮತ್ತದೆ ಬ್ರಾಹ್ಮಣ್ಯಕ್ಕೆ ಜೋತು ಬಿದ್ದ ಮಠಾಧಿಪತಿಗಳು

ಲಿಂಗಾಯತ ತತ್ವಗಳಿಗೆ ಎಳ್ಳು ನೀರು ಬಿಟ್ಟಿರುವ ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಆದರೆ ಲಿಂಗಾಯತರ ಗುರುಗಳೆಂದೆ ಕರೆಸಿಕೊಳ್ಳುತ್ತಿರುವ ಮಠಾಧೀಶರು ಹಾಗೂ ಕೆಲವು ಲಿಂಗಾಯತ ಸಂಘಟನೆಗಳು ಯಡ್ಡಿಗೆ ಖುಚರ್ಿ ದೊರೆಯದೇ ಇರುವುದು ಲಿಂಗಾಯತ ಜನಾಂಗಕ್ಕಾದ ಅನ್ಯಾಯ ಎಂಬಂತೆ ಬಿಂಬಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಹಲವಾರು ಕಡೆ ಪ್ರತಿಭಟನೆ ನಡೆಸಿದ್ದಾರೆ. ದೇವೇಗೌಡ, ಕುಮಾರಸ್ವಾಮಿಯ ಪ್ರತಿಕೃತಿ ದಹಿಸುವ ಮಟ್ಟಕ್ಕೂ ಇವರ ಆಕ್ರೋಶ ಮುಂದುವರೆದಿದೆ. ಅಂದಂತೆ ಕನರ್ಾಟಕದ ಬಹುತೇಕ ಜನ ಲಿಂಗಾಯತರು ತಮ್ಮನ್ನು ಬಿ.ಜೆ.ಪಿ. ಪಕ್ಷದ ಜೊತೆ ಗುರುತಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.ಯಡ್ಡಿಗೆ ಮಾತುಕೊಟ್ಟು ಮುಖ್ಯಮಂತ್ರಿ ಖುಚರ್ಿಯನ್ನು ಬಿಟ್ಟುಕೊಡದೇ ಇರುವ ಗೌಡರ ಧೂರ್ತ ರಾಜಕೀಯ ಸರಿ - ತಪ್ಪೆಂದು ವಾದಿಸಲು ನಾನಿಲ್ಲಿ ಬಯಸಿಲ್ಲ. ಆದರೆ ಬಿ.ಜೆ.ಪಿಯೊಂದಿಗೆ ಗುರುತಿಸಿಕೊಂಡದ್ದೇ ಆದರೆ ಲಿಂಗಾಯತರು ಎಷ್ಟು ಮಟ್ಟಿಗೆ ಲಿಂಗಾಯತರಾಗಿ ಉಳಿಯಬಲ್ಲರು ? ಎಂಬ ಕಳಕಳಿಯಿಂದ ಮಾತ್ರ ಈ ಲೇಖನ ಬರೆಯುತ್ತಿದ್ದೇನೆ.

ಹಾಗೆ ನೋಡಿದರೆ ತಾತ್ವಿಕವಾಗಿ ಲಿಂಗಾಯತರಿಗೂ - ಬಿ.ಜೆ.ಪಿ, ವಿಶ್ವಹಿಂದೂ ಪರಿಷತ್,ಬಜರಂಗದಳ, ಕಿಸಾನಸಂಘ, ಆರ್.ಎಸ್.ಎಸ್, ಎ.ಬಿ.ವಿ.ಪಿ. ಮುಂತಾದ ಸಂಘಟನೆಗಳಿಗೆ ಒಂಚೂರು ಸಂಬಂಧವೇ ಇಲ್ಲ. ಒಂದು ಉತ್ತರದ ತುದಿಯಾದರೆ ಮತ್ತೊಂದು ದಕ್ಷಿಣದ ತುದಿ. ಒಂದು ಬೆಳ್ಳಂಬೆಳಕಾದರೆ.ಮತ್ತೊಂದು ಕಾರ್ಗತ್ತಲು. ಒಂದು ಬಟ್ಟಾಬಯಲಾದರೆ, ಮತ್ತೊಂದು ನಿಗೂಢವಾದ ದಟ್ಟ ಕಾಡು. ಒಂದು ವೈಜ್ಞಾನಿಕವಾದರೆ ಇನ್ನೊಂದು ತೀರಾ ಅವೈಜ್ಞಾನಿಕ. ಒಂದು ಸ್ಪಷ್ಟವಾದರೆ ಇನ್ನೊಂದು ಅಸ್ಪಷ್ಟ. ಸತ್ಯ ಹೀಗಿರುವಾಗ ಕೆಲವರು ಮಾತ್ರ ಎರಡೂ ಒಂದೇ ಎಂದು ನಂಬಿಸಲು ಹೊರಟಿದ್ದಾರೆ. ಇದಕ್ಕೆ ಬಹು ಮುಖ್ಯ ಕಾರಣರು ಲಿಂಗಾಯತರ ಗುರುಗಳೆಂದು ಕರೆಸಿಕೊಳ್ಳಲಾಗುತ್ತಿರುವ ಸ್ವಾಮಿಗಳು ಎಂದು ಇಲ್ಲಿ ನೇರವಾಗಿ ಹೇಳಲು ಇಚ್ಚಿಸುತ್ತೇನೆ.

ಕನರ್ಾಟಕದ ಕೆಲವು ಬೆರಳೆಣಿಕೆಯ ಸ್ವಾಮಿಗಳನ್ನು ಹೊರತು ಪಡಿಸಿದರೆ ಬಹುತೇಕರು ಈಗಾಗಲೇ ಚಡ್ಡಿ ತೊಟ್ಟಿದ್ದಾರೆ. ಕೆಲವರಂತೂ ತಮ್ಮ ಮಠದ ಅಂಗಳದಲ್ಲಿ ಆರ್.ಎಸ್.ಎಸ್. ಕುಣಿತಕ್ಕೆ ಅವಕಾಶ ನೀಡಿದ್ದಾರೆ. ರಾಮನ ಗುಡಿ ಕಟ್ಟಲು ಇಟ್ಟಂಗಿಗಳನ್ನು ಸಂಗ್ರಹಿಸಿ ತಾವು ಬಹುದೊಡ್ಡ ಘನಂದಾರಿ ಕೆಲಸ ಮಾಡಿದ್ದೇವೆ ಎಂಬ ಹಮ್ಮಿನಲ್ಲಿ ಬೀಗಿದ್ದಾರೆ. ನಾಲ್ಕೈದು ಜನ ಸ್ವಾಮಿಗಳಂತೂ ಚಡ್ಡಿಗಳ ಅಂಗಳದಲ್ಲಿ ಚೆಡ್ಡಿಯನ್ನೂ ಕಳಚಿಕೊಂಡು ಕವಾಯತ್ತು ಮಾಡಿದ್ದಾರೆ. ಇದು ಲಿಂಗಾಯತರ ಧಾಮರ್ಿಕ ಗುರುಗಳೆಂದು ಕರೆಸಿಕೊಳ್ಳುವ ಜಂಗಮರು ತಲುಪಿರುವ ಅಧಃಪತನದ ಸ್ಪಷ್ಟ ಸೂಚನೆ.

ಸರಿಯಾಗಿ ಗ್ರಹಿಸಿದರೆ : ಬ್ರಾಹ್ಮಣಿಕೆಯನ್ನು ಮೈಗೂಡಿಸಿಕೊಂಡಿರುವ ಬಿ.ಜೆ.ಪಿ. ಹಾಗೂ ಇತರ ಸಂಘಟನೆಗಳಿಗೂ ಲಿಂಗಾಯತರ ಮಠಾಧಿಪತಿಗಳಿಗೂ ಏನೇನು ಫರಕು ಇಲ್ಲ. ಯಾವುದನ್ನು ಬಸವಾದಿ ಪ್ರಮಥರು ಬೇರು ಸಹಿತ ಕಿತ್ತೆಸೆದು ಹೊಸ ಕನಸುಗಳನ್ನು ಈ ನೆಲದಲ್ಲಿ ಉತ್ತಿ-ಬಿತ್ತಿ ಬೆಳೆದಿದ್ದರೋ ಆ ಎಲ್ಲವನ್ನು ಸಾರಾಸಗಟಾಗಿ ಅರಗಿ ದಿಂಡು ಹೊಡೆದವರು ಈ ಗುರುಗಳು. `` ಅಡ್ಡ ದೊಡ್ಡ ನಾನಲ್ಲವಯ್ಯ ದೊಡ್ಡ ಬಸುರು ಎನಗಿಲ್ಲವಯ್ಯ ಎಂದ ಬಸವಣ್ಣನವರೆಲ್ಲಿ ಜಂಗಮ ಜಾತಿ ಲಿಂಗಾಯತರಲ್ಲೇ ಮೇಲ್ ಜಾತಿ ಎಂದು ತಿಳಿದುಕೊಂಡುವ ಈ ಜಂಗಮ ಗುರುಗಳೆಲ್ಲಿ ? ಜಂಗಮಜಾತಿಯಲ್ಲಿ ಹುಟ್ಟಿದ್ದೆ ತಮ್ಮ ಬಹುದೊಡ್ಡ ಸಾಧನೆ ಎಂದು ತಿಳಿದುಕೊಂಡಿರುವ ಕನರ್ಾಟಕದ ಮಠಾಧೀಶರು ತಮ್ಮಲ್ಲಿ ಯಾವುದೇ ಯೋಗ್ಯತೆ ಇಲ್ಲದೆಯೂ ಮಠಗಳಲ್ಲಿ ಅಮರಿಕೊಂಡಿದ್ದಾರೆ.ಅವರು ದಿನ ನಿತ್ಯ ತಾವು ಕುಳಿತ ಮಠಗಳ ಮೂಲಕ ಬಸವಾದಿ ಪ್ರಮಥರ ವಿಚಾರಗಳನ್ನು ತೊತ್ತಲ ತುಳಿಯುತ್ತ ಮುನ್ನಡೆದಿದ್ದಾರೆ.

ಗೋತ್ರನಾಮವ ಬೆಸಗೊಂಡರೆ ಮಾತನಾಡದೆ ಸುಮ್ಮನಿದ್ದಿರದೇಕೆ ? ಮಾದಾರ ಚೆನ್ನಯ್ಯನ ಗೋತ್ರವೆಂದು ಹೇಳಿ. ಕಕ್ಕಯ್ಯನ ಗೋತ್ರವೆಂದು ಹೇಳಿ ಎಂಬ ಮೂಲಕ ಅವರಲ್ಲಿ ಆತ್ಮಸ್ಠೈರ್ಯ ತುಂಬಿದ್ದ ಬಸವಣ್ಣನವರ ವಚನದ ಸಾಲುಗಳನ್ನು ಮರೆತು ಬಿಟ್ಟಿದ್ದಾರೆ.ತಮ್ಮ ಮಠದ ಅಂಗಳದಲ್ಲಿ ಇಂದಿಗೂ ಕೆಲವು ಜನಾಂಗದವರನ್ನು ಬಿಟ್ಟುಕೊಳ್ಳುವುದಕ್ಕೆ ರೆಡಿ ಇಲ್ಲ. ಅಪ್ಪಿಕೊಳ್ಳವುದಂತೂ ದೂರದಮಾತು. ಗುಡಿ ಗುಂಡಾರಗಳು ನಡೆಸುವ ಶೋಷಣೆಗಳನ್ನು ಗಮನಿಸಿದ , ಧಾಮರ್ಿಕ ಗುತ್ತೇದಾರಿಕೆಯನ್ನು ಖಂಡಿಸಿ ತನ್ನಾಶ್ರಯದ ರತಿಸುಖವನ್ನು ತಾನುಂಬ ಊಟವನು ತಾ ಮಾಡಬೇಕಲ್ಲದೆ ಅನ್ಯರ ಕೈಲಿ ಮಾಡಿಸಬಹುದೆ ? ಎಂದು ಮರ್ಮಘಾತಕವಾದ ನುಡಿಗಳಿಂದ ಪ್ರಜ್ಞೆಯುಂಟು ಮಾಡಿದ್ದ ಬಸವಾದಿ ಶರಣರ ಮಾತು ಇಂದು ಯಾವ ಮಠದ ಸ್ವಾಮಿ ಪಾಲಿಸುತ್ತಿದ್ದಾನೆ ? ಎಲ್ಲರೂ ತಮ್ಮ ಗಮನ ಭಕ್ತರಿಗೆ ಕೊಡುವುದಕ್ಕಿಂತ ತಾವಿರುವ ಮಠದ ಜಡ ಕಟ್ಟಡಕ್ಕೆ ( ಗುಡಿಗೆ )ಹೆಚ್ಚು ಪ್ರಾಧಾನ್ಯತೆ ಕೊಡುತ್ತಿದ್ದಾರೆ. ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕ ನರಕ ಎಂಬ ಮಾತನ್ನು ಮುದ್ದಾಂ ಮರೆತಿದ್ದಾರೆ. ಅತ್ಯಂತ ವೈಭವೋಪೇತವಾಗಿ ಗುಡಿಯಲ್ಲಿ ಕಲ್ಲಾಗಿರುವ ದೇವರಿಗೆ ಹಾಲು,ಮೊಸರು, ತುಪ್ಪ,ಜೇನು ತುಪ್ಪದ ಅಭಿಷೇಕ ಮಾಡುವುದೇ ಪೂಜೆ ಎಂಬಂತಾಗಿದೆ. ಉಳ್ಳವರು ಶಿವಾಲಯ ಮಾಡುವರು ನಾನೇನ ಮಾಡಲಿ ಬಡವನ್ಯ ? ಎಂಬ ವಚನದ ಸಾಲು ಇವರಿಗೆ ಮನಸ್ಸಿನಲ್ಲಾದರೂ ಕಾಡಲಾರದೆ ? ತಾಳ ಮಾನ ಸರಸವನರಿಯೆ.ಓಜೆ ಬಜಾವಣೆಯ ಲೆಕ್ಕವನರಿಯೆ.ಅಮೃತಗಣ ದೇವಗಣವನರಿಯೆ. ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ - ಎಂಬ ಮಾತುಗಳನ್ನು ಹೊಸಕಿ ಹಾಕಿ ತಮ್ಮ ಗುಡಿಯಲ್ಲಿ ಪ್ರತಿಷ್ಠಾಪಿಸಿದ ದೇವರಿಗೆ ಮತ್ತದೇ ಹಿಂದಿನ ಸಂಸ್ಕೃತ ಭಾಷೆಯ ಮಂತ್ರಗಳನ್ನ ಹೇಳುತ್ತ ಮುನ್ನಡೆದಿದ್ದಾರೆ.ಯಾವುದು ಜನಭಾಷೆಯಾಗಿಲ್ಲವೋ ಅದು ಮೋಸದ ಭಾಷೆಯೆಂದೇ ಅರ್ಥ. ಆದರೆ ಮಠಾಧೀಶರೆಂಬ ಜಂಗಮ ಪುಂಗವರು ಈ ಮಾತನ್ನು ಒಪ್ಪಿಕೊಳ್ಳುವುದೇ ಇಲ್ಲ. ಯಾಕೆಂದರೆ ಜನಭಾಷೆಯ ಕನ್ನಡದಲ್ಲಿ ಎಲ್ಲವನ್ನು ಹೇಳಿದರೆ ತಮ್ಮ ಆಷಾಢಭೂತಿತನ ಬಯಲಾಗುತ್ತದೆ ಎಂಬ ಭಯ.

ನಾಳೆ ಬರುವುದು ನಮಗಿಂದೇ ಬರಲಿ. ಇಂದು ಬರುವುದು ನಮಗೀಗಲೇ ಬರಲಿ - ಎಂಬ ವಿಚಾರವನ್ನು ಮರೆತು ತಮ್ಮ ಭಕ್ತರಲ್ಲಿ ಭುಗಿಲು ಹುಟ್ಟಿಸುತ್ತ, ಅ ಭಯವನ್ನು ತಮ್ಮ ಪಾದಕ್ಕೆ ಎರಗಿದರೆ , ದಕ್ಷಿಣ ಕೊಟ್ಟರೆ ಕಡಿಮೆ ಮಾಡುತ್ತೇವೆ ಎಂಬ ಭ್ರಮೆ ಹುಟ್ಟಿಸುತ್ತ ಸಾಗಿದ್ದಾರೆ. ಹೆಣ್ಣು ಮಾಯೆಯೆಂಬರು. ಹೆಣ್ಣು ಮಾಯೆಯಲ್ಲ. ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ. ಮನದ ಮುಂದಣ ಆಸೆಯೇ ಮಾಯೆ ! ಎಂಬುದು ಶರಣರ ನಿಲುವು. ಆದರೆ ಮಠಾಧೀಶರು ತಮ್ಮ ಮಠಗಳ ಗರ್ಭಗುಡಿಯೊಳಗೆ ಇನ್ನೂ ಮಹಿಳೆಯರನ್ನು ಬಿಟ್ಟುಕೊಳ್ಳವುದಿಲ್ಲ.ಅವಳು ಮುಟ್ಟಾಗುವಳು ಎಂಬ ಕಾರಣಕ್ಕೆ ಇನ್ನೂ ಮುಟ್ಟಬೇಡಿ, ಎಂಬ ಮಂತ್ರವನ್ನು ಚಾಲ್ತಿಯಲ್ಲಿ ಇಟ್ಟುಕೊಂಡಿದ್ದಾರೆ. ಆದರೆ ಮಹಿಳೆಯರನ್ನು ಗರ್ಭಗುಡಿಯಲ್ಲಿ ಬಿಟ್ಟುಕೊಳ್ಳದೆ ಇರುವವರಂತೆ ತೋರಿಸಿಕೊಳ್ಳವ ಇವರು ತಮ್ಮ ಖಾಸಗಿಕೋಣೆಯಲ್ಲಿ ಅವಳ ಕಳ್ಳಗರ್ಭಕ್ಕೆ ಕಾರಣೀಭೂತರಾಗುತ್ತಾರೆ.

ಹಾವಿನ ಹಲ್ಲಕಳೆದು ಹಾವ ನಾಡಿಸಬಲ್ಲಡೆ ಹಾವಿನ ಸಂಗವೇ ಲೇಸು ಕಂಡಯ್ಯ , ಹೆಣ್ಣಿನೊಳಗೆ ಮನವಾದರೆ ಲಗ್ನವಾಗಿಕೂಡುವುದು , ನಡುವೆ ಸುಳಿವಾತ್ಮ ಹೆಣ್ಣೂ ಅಲ್ಲ. ಗಂಡೂ ಅಲ್ಲ - ಎಂಬ ಮಾತುಗಳು ಇವರಿಗೆ ಅಂತರಂಗದಲ್ಲಿ ಇಷ್ಟವಾಗಿಯೇ ಕಾಣುತ್ತವೆ. ಆದರೆ ಬಹಿರಂಗದಲ್ಲಿ ಅವನ್ನು ಜಾರಿಗೆ ತರಲಾಗದ ನಡುಕ. ಅದನ್ನು ಜಾರಿಗೆ ತಂದುದೆ ಆದರೆ ಎಲ್ಲಿ ತಾವು ತೊಟ್ಟುಕೊಂಡ ಕಾವಿ ಕಳಚಿಬಿದ್ದು , ಜನ ಕಾಲಿಗೆರಗಿ ದಕ್ಷಿಣ ಕೊಡುವುದು ತಪ್ಪುತ್ತದೋ ಎಂಬ ಭಯ.

ಮೇಲಿನ ಈ ಎಲ್ಲಾ ಲಕ್ಷಣಗಳು ಬ್ರಾಹ್ಮಣೀಕೆಯ ಸಂಕೇತ. ಬ್ರಾಹ್ಮಣಿಕೆ ಆಂದರೆ ಬೇರೆ ಇನ್ನೇನು ಅಲ್ಲ. ಆಥವಾ ಬ್ರಾಹ್ಮಣ ಜಾತಿಯಲ್ಲ. ಮೋಸದ ನಡವಳಿಕೆಯಿಂದ ಜನಸಾಮಾನ್ಯರನ್ನು ದಿಕ್ಕು ತಪ್ಪಿಸಿ ಅದರ ಲಾಭ ಪಡೆಯುವುದೆಂದೇ ಅರ್ಥ. ಬಸವಾದಿ ಶರಣರ ನಿರ್ಗಮನವಾದ ನಂತರ ಅವರ ಅನುಯಾಯಿ ಮಠಗಳೆಂದು ಹೇಳಿಕೊಂಡ ಸ್ವಾಮಿಗಳು , ಮಠಗಳು ಇಂದು ಆ ತತ್ವಗಳಿಗೆ ಎಳ್ಳು ನೀರು ಬಿಟ್ಟು ಹಿಂದಿನ ಪರಂಪರಾಗತವೆಂಬ ಜೊಳ್ಳು ಆಚರಣೆಗಳಿಗೆ ತಗಲು ಬಿದ್ದಿದ್ದಾರೆ. ವೇದವೆಂಬುದು ಓದಿನ ಮಾತು .ಶಾಸ್ತ್ರವೆಂಬುದು ಸಂತೆಯ ಸುದ್ದಿ. ಪುರಾಣವೆಂಬುದು ಪುರಾಣವೆಂಬುದು ಪುಂಡರಗೋಷ್ಠಿ, ತರ್ಕವೆಂಬುದು ತಗರ ಹರಟೆ ಎಂದು ಸಷ್ಟ ಮಾತುಗಳನ್ನು ಇವನ್ನೆಲ್ಲ ಜರಿದಿದ್ದರೂ ಲಿಂಗಾಯತ ಮಠಗಳ ಮಠಾಧೀಶರು ಇವನ್ನೇ ತಮ್ಮ ಮೌಲ್ಯ ಎಂದು ಆರಾಧಿಸುತ್ತ ಸಾಗಿದ್ದಾರೆ. ಒಂದರ್ಥದಲ್ಲಿ ಲಿಂಗಾಯತ ಮಠಾಧೀಪತಿಗಳೂ ಬ್ರಾಹ್ಮಣ್ಯಕ್ಕೆ ಮತ್ತೆ ಜೋತು ಬಿದ್ದಿದ್ದಾರೆ.

ನಮ್ಮ ಸಮಾಜ ಹಿಂದೊಂದು ಸಂದರ್ಭದಲ್ಲಿ ಬ್ರಾಹ್ಮಣ್ಯಕ್ಕೆ ಜೋತುಬಿದ್ದುದರ ಪರಿಣಾಮ ಘಜನಿಮೊಹ್ಮದನಂತಹ ಸಾಮಾನ್ಯ ರಾಜನು ಸಹ ನಮ್ಮ ದೇಶದ ಮೇಲೆ ದಂಡೆತ್ತಿ ಬಂದು ಇಲ್ಲಿನ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆದ. ನಮ್ಮ ತಾತ ಮುತ್ತಾತರೆಲ್ಲ ಅಕ್ಷರದ ಸಮೀಪಕ್ಕೆ ಬಂದರೆ ಅಕ್ಷರಗಳೇ ನಾಶವಾಗುತ್ತವೆ ಎಂದು ಹೇಳಿ ಅವರನ್ನು ಅಕ್ಷರ ಕಲಿಕೆಯಿಂದ ದೂರವೇ ಇಡಲಾಗಿತ್ತು. ಗುಲಾಮಗಿರಿ ಮಾಡುವುದೇ ಅವರವರ ಕರ್ಮ ಎಂದು ಸಾರಿಕೊಂಡು ಬರಲಾಗಿತ್ತು. ಇದರಿಂದ ದೇಶದ ಅತ್ಯುನ್ನತ ಸ್ಥಾನಗಳೆಲ್ಲ ಒಂದೇ ವರ್ಗದ ಜನರ ಪಾಲಾಗಿ ಹೋಯ್ತು. ಈ ಮಾತನ್ನು ತಿಳಿಯಬೇಕಾದವರು ಇಂದಿಗೂ ದೊಡ್ಡ ಹುದ್ದೆಯಲ್ಲಿ ವಿರಾಜಮಾನರಾಗಿರುವವರನ್ನು ಗಮನಿಸಬೇಕು. ಇವರು ಮತ್ತದೇ ಹಿಂದೆ ಇದ್ದ ಮನುವಾದವನ್ನು ಜಾರಿಗೆ ತರಲು ಹಂಬಲಿಸುತ್ತಾರೆ. ಮೌಢ್ಯಗಳನ್ನು ಯಥೇಚ್ಚವಾಗಿ ಬಿತ್ತುತ್ತಾರೆ. ಪೊಳ್ಳು ಸಿದ್ಧಾಂತಗಳ ಮೂಲಕ ಅವನ್ನು ಸಮಥರ್ಿಸುವ ಎತ್ತುಗಡೆಯಲ್ಲಿ ತೊಡಗುತ್ತಾರೆ. ಖೊಟ್ಟಿ ಗ್ರಂಥಗಳನ್ನು ರಚಿಸಿ ಅವು ಇತಿಹಾಸ ಎಂಬಂತೆ ಬಿಂಬಿಸುತ್ತಾರೆ. ಮನುಷ್ಯನ ಸಾಮಥ್ರ್ಯಕ್ಕಿಂತ ಅವನ ಹಣೆಬರಹವೇ ದೊಡ್ಡದು ಎಂಬಂತೆ ಹೇಳುತ್ತಾರೆ. ಶಾಸ್ತ್ರ - ಪುರಾಣ ಆಗಮಗಳೆಲ್ಲ ಮತ್ತೆ ವಿಜೃಂಭಿಸುತ್ತವೆ. ಜೋತಿಷ್ಯಶಾಸ್ತ್ರವೂ ಒಂದು ವೈಜ್ಞಾನಿಕ ತಳಹದಿಯ ಮೇಲೆ ರೂಪಿತವಾದ ಶಾಸ್ತ್ರವೆಂದು ಸಾರಿಕೊಂಡು ಬರುತ್ತಾರೆ. ಒಟ್ಟಿನಲ್ಲಿ ಮನುಷ್ಯತ್ವಕ್ಕಿಂತ ದೇವರೇ ಶ್ರೇಷ್ಠವೆಂದು ವಾದಿಸುತ್ತಾರೆ. ಆ ದೇವರನ್ನು ಗುತ್ತಿಗೆ ಹಿಡಿದು ನಮ್ಮನ್ನು ಕುರಿಯ ತುಪ್ಪಳ ಸುಲಿದಂತೆ ಸುಲಿಯುತ್ತಾರೆ. ಜೊತೆಗೆ ನಮ್ಮನ್ನು ಇವರು ಮೋಸಗೊಳಿಸುತ್ತಿದ್ದಾರೆ ಎಂಬ ಭಾವನೆ ಬರದಂತೆ ಹುತಾತ್ಮ ಪಟ್ಟಕಟ್ಟಿ ನಮ್ಮನ್ನು ಚಟ್ಟಕ್ಕೆ ಏರಿಸುತ್ತಾರೆ.

ನೋಡಿ : ಈ ನೆಲದಲ್ಲಿ ನಮ್ಮ ನಿಮ್ಮಂತೆ ರಕ್ತ ಮೌಂಸ ತುಂಬಿಕೊಂಡು ಓಡಾಡಿದ ಎಂಬಂತೆ ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಾಗದ ವ್ಯಕ್ತಿ ಮಹಾತ್ಮಗಾಂಧೀಜಿಯವರು. ಇಂಥ ಮಹಾತ್ಮನನ್ನು ಗುಂಡಿಕ್ಕಿ ಕೊಂದವರು ಇದೇ ಸನಾತನಿಗಳು. ಆದರೆ ಇವತ್ತು ಮತ್ತದೇ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಾರೆ. ಆತನ ಹೆಸರನ್ನು ಕ್ಷಣ ಕ್ಷಣವೂ ಪಠಿಸುತ್ತಾರೆ. ನಾಗಾಜರ್ುನ ಕೊಂಡ ಎಂಬ ಪ್ರದೇಶದಲ್ಲಿ ಬೌದ್ಧರ ಮಾರಣಹೋಮಕ್ಕೆ ಕಾರಣಿಕರ್ತನಾದ ಶಂಕರಾಚಾರ್ಯರ ತತ್ವಗಳೇ ಇವರಿಗೆ ಆದರ್ಶ.ಗೋಡ್ಸೆ, ಗೋವಾಳ್ಕರ್ ಗಳೆಲ್ಲ ಇವರ ನೈತಿಕ ಸಂಕೇತಗಳು.ಮನುಸ್ಮೃತಿ ಎಂಬ ಪಾಖಂಡಿ ಗ್ರಂಥವೇ ಇವರ ಸಂವಿಧಾನ. ಅಸಮಾನತೆಯನ್ನು ಪೋಷಿಸಿ ಬೆಳೆಸುವುದೇ ಇವರ ಆದ್ಯಕರ್ತವ್ಯ ಎಂದು ತಿಳಿದಿರುವವರು.

ವ್ಯಾಸ ಬೋಯಿತಿಯ ಮಗ , ಮಾರ್ಕಂಡೆಯ ಮಾತಂಗಿಯ ಮಗ,ಅಗಸ್ಯ ಕಬ್ಬಿಲನಾಗಿದ್ದರೂ ಸೈಇವರು ನಮ್ಮದೇ ಜನಾಂಗದ ಮಾಡೆಲ್ ಗಳನ್ನು ಪಡೆದು ಅವಕ್ಕೆ ಮತ್ತದೇ ಬ್ರಾಹ್ಮಣ್ಯದಲ್ಲಿ ಅದ್ದಿ ನಮ್ಮ ಮುಂದೆ ಇಡುತ್ತಾರೆ. ರಾಮ ಕ್ಷತ್ರಿಯನಾಗಿದ್ದರೂ , ಕೃಷ್ಣ ಗೊಲ್ಲರವನಾಗಿದ್ದರೂ , ಬುದ್ಧ ಕ್ಷತ್ರಿಯನಾಗಿದ್ದರೂ ,ಅಂಬೇಡ್ಕರ್ ಕೆಳವರ್ಗಕ್ಕೆ ಸೇರಿದವನಾಗಿದ್ದರೂ ಅವರನ್ನು ಮತ್ತೆ ಮತ್ತೆ ವಿಷ್ಣುವಿನ ಅವತಾರಗಳೆಂದು ಪ್ರಚುರ ಪಡಿಸುತ್ತಾರೆ.ಬ್ರಾಹ್ಮಣ್ಯವನ್ನು ಸಂಪೂರ್ಣ ವಿರೋಧಿಸಿದ ಬುದ್ಧನಂತಹ ವ್ಯಕ್ತಿಯನ್ನೂ ಯಾವ ನಾಚಿಕೆಯೂ ಇಲ್ಲದೆ ವಿಷ್ಣುವಿನ ಹನ್ನೊಂದನೆಯ ಅವತಾರ ಎಂದು ಕರೆಯುತ್ತಾರೆ. ಯಾವುದನ್ನು ಅಂಬೇಡ್ಕರ ತನ್ನ ಜೀವತಾವಧಿಯವರೆಗೂ ವಿರೋಧಿಸುತ್ತ ಬಂದನೋ , ಆತನಿಗೆ ಆಧುನಿಕ ಮನು ಎಂಬ ಬಿರುದು ನೀಡಿ (ಗೌರವಿಸುವಂತೆ ಕಂಡರೂ) ಆತನನ್ನು ಸೂಕ್ಮವಾಗಿ ಕೊಲೆಮಾಡುತ್ತಾರೆ. ಹಿಂದೂ ಧರ್ಮದ ಟೊಳ್ಳುತನಗಳನ್ನು ನಖಶಿಖಾಂತವಾಗಿ ವಿರೋಧಿಸಿದ ಹಾಗೂ ಯಾವಾಗಲೂ ಪ್ರಗತಿಗೆ ವಿರೋಧಿಯಾಗಿರುವ ಪೂಜಾರಿ, ಪುರೋಹಿತ ಮುಲ್ಲಾ, ಪಾದ್ರಿಗಳನ್ನು ನಂಬಲು ಹೋಗಬೇಡಿ. ಅವರು ಪ್ರಗತಿಯ ವಿರೋಧಿಗಳು. ಅವರು ತಮ್ಮನ್ನು ಎಂದೂ ತಿದ್ದಿಕೊಳ್ಳುವುದಿಲ್ಲ. ಅವರನ್ನು ಈ ದೇಶದಿಂದಲೇ ಒದ್ದೋಡಿಸಿ ಎಂದು ಸ್ಪಷ್ಟವಾಗಿಯೆ ಹೇಳಿದರು. ಆದರೆ ಪರಿಸ್ಥಿತಿ ಏನಾಗಿದೆಯೆಂದರೆ ಇಂಥ ಕ್ರಾಂತಿಪುರುಷ ವಿವೇಕಾನಂದರಿಗೂ ಇಂದು ಮಕಮಲ್ಲಿನ ಟೋಪಿ ಹೊಲಿಸಿದ್ದಾರೆ ಈ ಹಿಂದೂ ಟೆರರಿಸ್ಟ ಗಳು. ಚಾಲ್ತಿಯಲ್ಲಿರುವ (ನಮ್ಮವರೇ ಆಗಿರುವ - ನಮ್ಮವೇ ಆಗಿರುವ ) ವ್ಯಕ್ತಿ - ಸಂಗತಿಗಳನ್ನು ತಮ್ಮ ಕಬ್ಜಾ ಮಾಡಿಕೊಂಡು ನಮ್ಮನ್ನು ಕುರಿಗಳನ್ನಾಗಿ ಮಾಡುತ್ತಾರೆ. ಹುಬ್ಬಳ್ಳಿಯ ಈದ್ಗಾ ಮೈದಾನ , ಅಯೋಧ್ಯೆಯ ರಾಮಮಂದಿರ , ಬಾಬಾ ಬುಡನಗಿರಿ ಬೆಟ್ಟ , ಇದೀಗ ಸೇತು ಸಮುದ್ರಂ ವಿವಾದಗಳನ್ನು ಯಾರಾದರೂ ಸೂಕ್ಷ್ಮವಾಗಿ ಪರಿಶೀಲಿಸಬಹುದು.

ಇವನ್ನೆಲ್ಲ ಗಮನಿಸಿದಾಗ ಬ್ರಾಹ್ಮಣರ ಪುರೋಹಿತರಿಗೂ , ಲಿಂಗಾಯತರ ಜಂಗಮ ಮಠಾಧೀಶರಿಗೂ ಯಾವುದೇ ರೀತಿಯ ವ್ಯತ್ಯಾಸ ಕಂಡುಬರುವುದಿಲ್ಲ. ಇವರಲ್ಲಿ ಯಾವುದೇ ತಾತ್ವಿಕ ಸಿದ್ಧಾಂತಗಳೂ ಇಲ್ಲ. ತಮ್ಮ ಸುತ್ತ ನೆರೆದ ಜನರನ್ನು ಧರ್ಮದ ಹೆಸರು ಹೇಳಿಕೊಂಡು ಸುಲಿಯುವುದೊಂದೇ ಇವರ ಧರ್ಮವಾಗಿದೆ. ಹಿಂದೊಂದು ಸಂದರ್ಭದಲ್ಲಿ ಮೈಸೂರು ರಾಜ್ಯದ ಹೈಕೋರ್ಟ ಮೆಟ್ಟಲನ್ನು ಏರಿ ಅಲ್ಲಿ ವಾದಿಸಿ ನ್ಯಾಯಿಕ ತೀಪರ್ು ಪಡೆದಂತೆ ಇವರೂ ಲಿಂಗಿ ಬ್ರಾಹ್ಮಣರು ! ರಂಭಾಪುರಿ ಪಂಚಪೀಠ(ಡ)ದ ಸ್ವಾಮಿಯಂತೂ ಇಂಥ ಲಿಂಗಿ ಬ್ರಾಹ್ಮಣರ ಹಿಂದೆ ಇಂದು ಲಿಂಗಾಯತರು ಹೊರಟಿರುವುದು ಎಷ್ಟು ಸರಿ ? ಮಠಾಧೀಶರೇ ನಮ್ಮ ಏನೆಲ್ಲ ಬೆಳವಣಿಗೆಗೆ ಕಾರಣ ಎಂದು ತಿಳಿದ ಲಿಂಗಾಯತರ ಅವಜ್ಞತೆಯೂ ಇದಕ್ಕೆ ಕಾರಣ ಎಂದು ಹೇಳದೆ ವಿಧಿಯಿಲ್ಲವಾಗಿದೆ.

ಇವನಾರವ ಇವನಾರವ ಎನ್ನದೆ ಇವ ನಮ್ಮವ , ಇವ ನಮ್ಮವ ಎಂದು ಎಲ್ಲರನ್ನು ಅಪ್ಪಿಕೊಂಡ ಧರ್ಮ ಮನುವಾದಿಗಳಾಗಿರುವ ಜಂಗಮರ ಮೂಲಕ , ಇವನಾರ - ಇವನಾರವ ಎಂದು ಕೇಳುವಂತಾಗುತ್ತೇವೆ. ಅದ್ದರಿಂದ ನಿಜವಾದ ಬಸವಾದಿ ಶರಣರ ಅನುಯಾಯಿಗಳೆಂದು ಹೇಳಿಕೊಳ್ಳುವ ಲಿಂಗಾಯತರು ತಮ್ಮ ತತ್ವಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ವಚನ ಸಾಹಿತ್ಯದ ತಾಯಿ ಹೇಳಿದಂತೆ ನಾವು ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆ ಹೊರತು , ಈ ಗುರುಗಳೆಂಬ ಭಾವುಗಗಳು ಹೇಳಿದಂತೆ ಅಲ್ಲ. ನಮಗೆ ನಮ್ಮ ಅರಿವು ಗುರುವಾಗಬೇಕೆ ಹೊರತು. ಯಾವೊಬ್ಬ ವ್ಯಕ್ತಿ ಗುರುವಾಗಬಾರದು.

ವೈದಿಕಶಾಹಿಯ ಗರ್ಭದಿಂದ ಉದಿಸಿದ ಬಿ.ಜೆ.ಪಿ ಎಂಬ ಸನಾತನಿಗಳ ಪಕ್ಷವನ್ನು ನಮ್ಮ ಗುರುಗಳು (?)( ಜಂಗಮರು) ನಂಬಿದ್ದಾರೆಂದೂ ಲಿಂಗಾಯತರು ನಂಬಿಕೊಂಡು ಹೊರಟೆವೆಂದರೆ ನಮ್ಮ ಹಳ್ಳವನ್ನು ನಾವೇ ತೋಡಿಕೊಳ್ಳುತ್ತೇವೆ. ಅಥವಾ ಹುಲಿಯ ಮೀಸೆಯ ಹಿಡಿದು ಉಯ್ಯಾಲೆ ಆಡಿದರು , ಮಡಿಲಲ್ಲಿ ಸುಣ್ಣವ ಕಟ್ಟಿಕೊಂಡು ಮಡುವ ಬಿದ್ದರು ಎಂಬಂಥ ಸ್ಥಿತಿಯಲ್ಲಿ ಲಿಂಗಾಯತರು ಸರ್ವನಾಶವಾಗುತ್ತಾರೆ. ಈ ಮೂಲಕ ಬಸವಾದಿ ಶರಣರನ್ನು ಕ್ಷಣ ಕ್ಷಣಕ್ಕೂ ಇರಿದು ಕೊಲ್ಲಿದ ಘಾತುಕತನಕ್ಕೆ ಪಕ್ಕಾಗುತ್ತಾರೆ. ಆದರೆ ಈ ಸತ್ಯವನ್ನು ಕನರ್ಾಟಕದ ಲಿಂಗಾಯತರು ತಿಳಿದುಕೊಳ್ಳುವರೆ ? 0 ವಿಶ್ವಾರಾಧ್ಯ ಸತ್ಯಂಪೇಟೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ